Publish Date: Thu, 20 Mar 2025 (11:33 IST)
Updated Date: Thu, 20 Mar 2025 (11:35 IST)
ಬೆಂಗಳೂರು: ಸತತ ಏರುಗತಿಯಲ್ಲಿದ್ದ ಅಡಿಕೆ ಬೆಲೆ ಕಳೆದ ಒಂದು ವಾರದಿಂದ ಸ್ಥಿರವಾಗಿದೆ. ಇಂದೂ ಕೂಡಾ ಮಾರುಕಟ್ಟೆಯಲ್ಲಿ ಅಡಿಕೆ, ಕಾಳುಮೆಣಸು ಮತ್ತು ಕೊಬ್ಬರಿ ಬೆಲೆ ಯಥಾ ಸ್ಥಿತಿಯಲ್ಲಿ ಮುಂದುವರಿದಿದೆ.
ರಾಜ್ಯದಲ್ಲಿ ಅಡಿಕೆ ಮತ್ತು ಕಾಳುಮೆಣಸು ಬೆಲೆಯಲ್ಲಿ ಪ್ರತಿನಿತ್ಯ 5-10 ರೂ.ಗಳಷ್ಟು ಏರಿಕೆಯಾಗುತ್ತಲೇ ಇತ್ತು. ಆದರೆ ಕಳೆದ ಒಂದು ವಾರದಿಂದ ಬೆಲೆ ನಿಂತಲ್ಲೇ ನಿಂತಿದೆ. ಹಾಗಂತ ಇಳಿಕೆಯೂ ಆಗಿಲ್ಲ ಎನ್ನುವುದು ಗಮನಾರ್ಹ. ಇಂದಿನ ಮಾರುಕಟ್ಟೆ ದರ ಹೇಗಿದೆ ಇಲ್ಲಿದೆ ವಿವರ.
ಹೊಸ ಅಡಿಕೆಗೆ ನಿನ್ನೆ ಮಾರುಕಟ್ಟೆಯಲ್ಲಿ ಪ್ರತೀ ಕೆ.ಜಿ.ಗೆ ಗರಿಷ್ಠ 400 ರೂ.ಗಳಷ್ಟಿತ್ತು. ಇದು ಇಂದೂ ಮುಂದುವರಿದಿದೆ. ಫ್ರೆಶ್ ಚೋಲ್ ಅಡಿಕೆಗೆ ಗರಿಷ್ಠ 455 ರಷ್ಟಿತ್ತು. ಅದೀಗ 460 ರೂ.ಗೆ ತಲುಪಿದೆ. ಡಬಲ್ ಚೋಲ್ ಅಡಿಕೆಗೆ 495 ರೂ.ಗಳಷ್ಟು ದರವಿತ್ತು. ಇಂದೂ ಅದೇ ದರ ಮುಂದುವರಿದಿದೆ. ಇಂದಿನ ಮಾರುಕಟ್ಟೆ ಪ್ರಕಾರ ಈ ದರಗಳಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.
ಕಾಳುಮೆಣಸು ದರ
ಕಾಳುಮೆಣಸಿನ ಬೆಲೆಯಲ್ಲೂ ಯಾವುದೇ ಹೆಚ್ಚು-ಕಡಿಮೆಯಾಗಿಲ್ಲ. ಕಳೆದ ಒಂದು ವಾರದಿಂದ ಯಥಾಸ್ಥಿತಿಯಲ್ಲಿದೆ. ಕಾಳುಮೆಣಸಿಗೆ ನಿನ್ನೆ ಗರಿಷ್ಠ 680 ರೂ.ಗಳಷ್ಟಿತ್ತು. ಕಳೆದ ಕೆಲವು ದಿನಗಳಿಂದ ಇದೇ ಬೆಲೆಯಿದೆ. ಇಂದು ಕೂಡಾ ಅದೇ ದರ ಮುಂದುವರಿದಿದೆ. ಇನ್ನು, ಒಣಕೊಬ್ಬರಿ ಬೆಲೆ ನಿನ್ನೆ ಗರಿಷ್ಠ 150 ರೂ.ಗಳಷ್ಟಿದೆ. ಇದರ ಬೆಲೆಯಲ್ಲೂ ಯಾವುದೇ ವ್ಯತ್ಯಾಸವಾಗಿಲ್ಲ.