Select Your Language

Notifications

webdunia
webdunia
webdunia
webdunia

Arecanut price today: ಇಂದು ಅಡಿಕೆ, ಕಾಳುಮೆಣಸು ರೇಟು ಹೆಚ್ಚಾಗಿಲ್ಲ, ಕಡಿಮೆಯೂ ಇಲ್ಲ ಇಲ್ಲಿದೆ ಡೀಟೈಲ್ಸ್

Peppar

Krishnaveni K

ಬೆಂಗಳೂರು , ಶನಿವಾರ, 15 ಮಾರ್ಚ್ 2025 (11:49 IST)
ಬೆಂಗಳೂರು: ಇಂದು ಮಾರುಕಟ್ಟೆಯಲ್ಲಿ ಅಡಿಕೆ, ಕಾಳುಮೆಣಸು ಮತ್ತು ಕೊಬ್ಬರಿ ಬೆಲೆ ಎಷ್ಟಾಗಿದೆ ಎಂಬ ವಿವರ ಇಲ್ಲಿದೆ. ಇಂದಿನ ಮಾರುಕಟ್ಟೆ ದರ ವಿವರಣೆ ಪ್ರಕಾರ ಅಡಿಕೆ, ಕಾಳುಮೆಣಸು ಬೆಲೆ ಯಥಾಸ್ಥಿತಿಯಲ್ಲಿದೆ ಎನ್ನಬಹುದು.

ರಾಜ್ಯದಲ್ಲಿ ಅಡಿಕೆ ಮತ್ತು ಕಾಳುಮೆಣಸು ಬೆಲೆಯಲ್ಲಿ ಪ್ರತಿನಿತ್ಯ 5-10 ರೂ.ಗಳಷ್ಟು ಏರಿಕೆಯಾಗುತ್ತಲೇ ಇತ್ತು. ಕಳೆದ ಎರಡು ದಿನಗಳಿಂದ ಹೆಚ್ಚೂ ಇಲ್ಲ, ಕಡಿಮೆಯೂ ಇಲ್ಲ ಎನ್ನುವ ಪರಿಸ್ಥಿತಿಯಿದೆ. ಇಂದಿನ ಮಾರುಕಟ್ಟೆ ದರ ಹೇಗಿದೆ ಇಲ್ಲಿದೆ ವಿವರ.

ಹೊಸ ಅಡಿಕೆಗೆ ನಿನ್ನೆ ಮಾರುಕಟ್ಟೆಯಲ್ಲಿ ಪ್ರತೀ ಕೆ.ಜಿ.ಗೆ ಗರಿಷ್ಠ 400 ರೂ.ಗಳಷ್ಟಿತ್ತು. ಫ್ರೆಶ್ ಚೋಲ್ ಅಡಿಕೆಗೆ ಗರಿಷ್ಠ 455 ರಷ್ಟಿತ್ತು. ಡಬಲ್ ಚೋಲ್ ಅಡಿಕೆಗೆ 495 ರೂ.ಗಳಷ್ಟು ದರವಿತ್ತು. ಇಂದೂ ಅದೇ ದರ ಮುಂದುವರಿದಿದೆ. ಇಂದಿನ ಮಾರುಕಟ್ಟೆ ಪ್ರಕಾರ ಈ ದರಗಳಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.

ಕಾಳುಮೆಣಸು ದರ
ಇನ್ನು ಕಾಳುಮೆಣಸು ಬೆಳೆಗಾರರಿಗೂ ಇದು ಲಾಭ ಮಾಡಿಕೊಳ್ಳಬಹುದಾದ ಸಮಯವಾಗಿದೆ. ಕಾಳುಮೆಣಸಿಗೆ ನಿನ್ನೆ ಗರಿಷ್ಠ 680 ರೂ.ಗಳಷ್ಟಿತ್ತು. ಕಳೆದ ಮೂರು ದಿನಗಳಿಂದ ಇದೇ ಬೆಲೆಯಿದೆ. ಇಂದು ಕೂಡಾ ಅದೇ ದರ ಮುಂದುವರಿದಿದೆ. ಇನ್ನು, ಒಣಕೊಬ್ಬರಿ ಬೆಲೆ ನಿನ್ನೆ ಗರಿಷ್ಠ 150 ರೂ.ಗಳಷ್ಟಿದೆ. ಇದರ ಬೆಲೆಯಲ್ಲೂ ಯಾವುದೇ ವ್ಯತ್ಯಾಸವಾಗಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನ ಜಯನಗರದಲ್ಲಿ ನಾಯಿ ಮೇಲೆ ರೇಪ್ ಮಾಡಿ ರಾಕ್ಷಸೀಯ ಕೃತ್ಯ