ಬೆಂಗಳೂರು: ಇನ್ನೇನು ಮದುವೆ ಸೀಸನ್ ಗಳು ಶುರುವಾಗಿದ್ದು ಇದರ ಬೆನ್ನಲ್ಲೇ ಚಿನ್ನದ ದರವೂ ಮುಟ್ಟಿದರೇ ಶಾಕ್ ಆಗುವಷ್ಟು ಏರಿಕೆಯಾಗಿದೆ. ಇಂದಿನ ದರ ಹೇಗಿದೆ ಇಲ್ಲಿ ನೋಡಿ ವಿವರ.
22 ಕ್ಯಾರೆಟ್ ನ 1 ಗ್ರಾಂ ಚಿನ್ನದ ಬೆಲೆ 7,990 ರೂ.ಗೆ ಬಂದು ತಲುಪಿದ್ದು, ನಿನ್ನೆಗಿಂತ 1 ರೂ. ಹೆಚ್ಚಾಗಿದೆ. 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 88, 970 ರೂ.ಗೆ ಬಂದು ನಿಂತಿದೆ. ಶುದ್ಧ ಚಿನ್ನದ ಬೆಲೆ 110 ರೂ.ಗಳಷ್ಟು ಏರಿಕೆಯಾಗಿದೆ. 18 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂಗೆ 6,539 ರೂ. ಆಗಿದೆ. ನಿನ್ನೆಗಿಂತ 1 ರೂ.ಗಳಷ್ಟು ಬೆಲೆ ಹೆಚ್ಚಾಗಿದೆ.
ಈ ತಿಂಗಳ ಆರಂಭದಲ್ಲಿ 10 ಗ್ರಾಂಗೆ 80 ಸಾವಿರದಷ್ಟಿದ್ದ ಚಿನ್ನದ ಬೆಲೆ ಈಗ ಸರಿ ಸುಮಾರು 10 ಸಾವಿರ ರೂ.ಗಳಷ್ಟು ಏರಿಕೆಯಾಗಿದೆ. ನಿನ್ನೆಗೆ ಹೋಲಿಸಿದರೆ ಬೆಳ್ಳಿ ಪ್ರತೀ ಕೆಜಿ ಬೆಲೆಯಲ್ಲಿ 100 ರೂ.ಗಳಷ್ಟು ಏರಿಕೆಯಾಗಿದೆ.
ಇನ್ನೇನು ಮದುವೆ ಸೀಸನ್ ಗಳು ಶುರುವಾಗಿದ್ದು, ಇದರ ಬೆನ್ನಲ್ಲೇ ಚಿನ್ನ, ಬೆಳ್ಳಿ ಬೆಲೆ ಗಗನಕ್ಕೇರಿದೆ. ಇದರಿಂದು ಮಧ್ಯಮ ವರ್ಗದವರಿಗೆ ಚಿನ್ನ-ಬೆಳ್ಳಿ ಖರೀದಿ ಮಾಡುವುದು ದೊಡ್ಡ ಹೊರೆಯಾಗುತ್ತಿದೆ.