ಬೆಂಗಳೂರು: ಬೆಲೆ ಏರಿಕೆಯಿಂದಾಗಿ ಅಡಿಕೆ ಬೆಳೆಗಾರರು ಖುಷಿಯಲ್ಲಿದ್ದರೆ, ಕಾಳುಮೆಣಸು ಬೆಲೆ ಇಳಿಕೆಯಿಂದ ಬೆಳೆಗಾರರು ನಿರಾಸೆಯಲ್ಲಿದ್ದರು. ಇಂದು ಅಡಿಕೆ ಮತ್ತು ಕಾಳು ಮೆಣಸು ದರ ಏರಿಕೆಯಾಗಿದೆಯೇ, ಇಂದಿನ ದರ ಹೇಗಿದೆ ಇಲ್ಲಿದೆ ವಿವರ.
ಅಡಿಕೆ ಬೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಏರಿಕೆಯಾಗುತ್ತಲೇ ಇತ್ತು. ನಿನ್ನೆಯೂ ಕೆಲವು ವರ್ಗದ ಅಡಿಕೆ ದರ ಏರಿಕೆಯಾಗಿ ರೈತರ ಮೊಗದಲ್ಲಿ ಹರ್ಷ ತಂದಿತ್ತು. ಆದರೆ ಇಂದು ಅಡಿಕೆ ದರದಲ್ಲಿ ಏರಿಕೆಯೂ ಇಲ್ಲ ಇಳಿಕೆಯೂ ಇಲ್ಲ ಎಂಬ ಸ್ಥಿತಿಯಿದೆ. ನಿನ್ನೆ ಹೊಸ ಅಡಿಕೆ ಬೆಲೆ ಗರಿಷ್ಠ 440 ರೂ. ಗಳಷ್ಟಿದ್ದರೆ, ಹಳೆ ಅಡಿಕೆ ಬೆಲೆ ಗರಿಷ್ಠ 485 ರೂ.ಗಳಷ್ಟಿತ್ತು. ಇಂದೂ ಕೂಡಾ ಅದೇ ದರ ಮುಂದುವರಿದಿದೆ. ಡಬಲ್ ಚೋಲ್ ಅಡಿಕೆ ಬೆಲೆಯಲ್ಲೂ ಯಾವುದೇ ವ್ಯತ್ಯಾಸವಾಗಿಲ್ಲ. ಇಂದು ಡಬಲ್ ಚೋಲ್ ಬೆಲೆ ಗರಿಷ್ಠ 500 ರೂ.ಗಳಷ್ಟಿದೆ.
ಹೊಸ ಫಟೋರ ದರದಲ್ಲೂ ಯಾವುದೇ ವ್ಯತ್ಯಾಸವಿಲ್ಲ, 320 ರೂ.ಗಳಷ್ಟೇ ಇದೆ. ಹಳೆ ಫಟೋರ ದರ 340 ರೂ. ಗಳಲ್ಲೇ ಇದೆ. ಹೊಸ ಉಳ್ಳಿ ದರ ಏರಿಕೆಯಾಗಿ ಗರಿಷ್ಠ 200 ರೂ., ಹಳೆ ಉಳ್ಳಿ ದರವೂ 215 ಗಳಷ್ಟೇ ಇದೆ. ಹೊಸ ಕೋಕ ದರವೂ ಯಥಾಸ್ಥಿತಿಯಲ್ಲಿದ್ದು 280 ರೂ., ಹಳೇ ಕೋಕ 290 ರೂ. ಗಳಷ್ಟೇ ಇದೆ.
ಕಾಳುಮೆಣಸು ದರ
ಕಾಳುಮೆಣಸು ಬೆಳೆಗಾರರಿಗೆ ಕಳೆದ ಎರಡು-ಮೂರು ದಿನಗಳಿಂದ ಸತ ಬೆಲೆ ಇಳಿಕೆಯಾಗಿ ನಿರಾಸೆಯಾಗಿತ್ತು. ಆದರೆ ಇಂದು ಕಾಳುಮೆಣಸು ದರವೂ ಯಥಾ ಸ್ಥಿತಿಯಲ್ಲಿದೆ. ನಿನ್ನೆ ಕಾಳುಮೆಣಸು ದರ ಗರಿಷ್ಠ 685 ರೂ.ಗೆ ಬಂದು ತಲುಪಿತ್ತು. ಇಂದೂ ಅದೇ ಬೆಲೆ ಮುಂದುವರಿದಿದೆ. ಇನ್ನು ಒಣಕೊಬ್ಬರಿ ದರ ಗರಿಷ್ಠ 175 ರೂ.ಗಳಷ್ಟೇ ಇದೆ.