Select Your Language

Notifications

webdunia
webdunia
webdunia
webdunia

Arecanut price today: ಅಡಿಕೆ ಬೆಳೆಗಾರರಿಗೆ ಬಂಪರ್, ಕಾಳುಮೆಣಸಿಗೆ ಮತ್ತೆ ನಿರಾಸೆ, ಇಂದಿನ ಬೆಲೆ ಎಷ್ಟಾಗಿದೆ ನೋಡಿ

Arecanut
ಬೆಂಗಳೂರು: ನಿನ್ನೆ ಯಥಾಸ್ಥಿತಿಯಲ್ಲಿದ್ದ ಅಡಿಕೆ ಬೆಲೆ ಇಂದು ಏರಿಕೆಯಾಗಿದ್ದು ಬೆಳೆಗಾರರಿಗೆ ಬಂಪರ್ ಸಿಕ್ಕಂತಾಗಿದೆ.  ಆದರೆ ಕಾಳುಮೆಣಸು ಬೆಳೆಗಾರರಿಗೆ ನಿರಾಸೆಯಾಗಲಿದೆ. ಯಾಕೆಂದರೆ ಕಾಳುಮೆಣಸು ಬೆಲೆ ಇಂದು ಮತ್ತೆ ಇಳಿಕೆಯಾಗಿದೆ. ಇಂದಿನ ದರ ಹೇಗಿದೆ ಇಲ್ಲಿದೆ ವಿವರ.

ಅಡಿಕೆ ಬೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಏರಿಕೆಯಾಗುತ್ತಲೇ ಇದೆ. ಮೊನ್ನೆ ಅಡಿಕೆ ಬೆಲೆಯಲ್ಲಿ ಏರಿಕೆ ಕಂಡುಬಂದಿದ್ದು, ಬೆಳೆಗಾರರ ಮೊಗದಲ್ಲಿ ಹರ್ಷ ತಂದಿತ್ತು. ನಿನ್ನೆ ಏರಿಕೆಯಾಗದೇ ಇದ್ದರೂ ಇಳಿಕೆಯಾಗಿರಲಿಲ್ಲ. ಆದರೆ ಇಂದು ಮತ್ತೆ ಅಡಿಕೆ ಬೆಲೆ ಕೊಂಚ ಏರಿಕೆಯಾಗಿದೆ. ನಿನ್ನೆ ಹೊಸ ಅಡಿಕೆ ಬೆಲೆ ಗರಿಷ್ಠ 440 ರೂ. ಗಳಷ್ಟಿದ್ದರೆ, ಹಳೆ ಅಡಿಕೆ ಬೆಲೆ ಗರಿಷ್ಠ 485 ರೂ.ಗಳಷ್ಟಿತ್ತು. ಇಂದೂ ಕೂಡಾ ಅದೇ ದರ ಮುಂದುವರಿದಿದೆ. ಡಬಲ್ ಚೋಲ್ ಅಡಿಕೆ ಬೆಲೆಯಲ್ಲೂ ಯಾವುದೇ ವ್ಯತ್ಯಾಸವಾಗಿಲ್ಲ. ಇಂದು ಡಬಲ್ ಚೋಲ್ ಬೆಲೆ ಗರಿಷ್ಠ 500 ರೂ.ಗಳಷ್ಟಿದೆ.

ಹೊಸ ಫಟೋರ ದರದಲ್ಲೂ ಯಾವುದೇ ವ್ಯತ್ಯಾಸವಿಲ್ಲ, 320 ರೂ.ಗಳಷ್ಟೇ ಇದೆ. ಹಳೆ ಫಟೋರ ದರ 340 ರೂ. ಗಳಲ್ಲೇ ಇದೆ. ಹೊಸ ಉಳ್ಳಿ ದರ  ಏರಿಕೆಯಾಗಿ ಗರಿಷ್ಠ 200 ರೂ., ಹಳೆ ಉಳ್ಳಿ ದರವೂ 215 ಕ್ಕೆ ಏರಿಕೆಯಾಗಿದೆ. ಹೊಸ ಕೋಕ ದರವೂ 10 ರೂ. ಏರಿಕೆಯಾಗಿದ್ದು 280 ರೂ., ಹಳೇ ಕೋಕ 10 ರೂ. ಏರಿಕೆಯಾಗಿ 290 ರೂ. ಗೆ ತಲುಪಿದೆ.

ಕಾಳುಮೆಣಸು ದರ
ಕಾಳುಮೆಣಸು ಬೆಳೆಗಾರರಿಗೆ ಮತ್ತೆ ನಿರಾಸೆಯಾಗಲಿದೆ. ಸತತ ಎರಡು ದಿನ ಏರಿಕೆಯಾಗಿತ್ತು. ಆದರೆ ಈಗ ಸತತ ಮೂರನೇ ದಿನವೂ ಇಳಿಕೆಯಾಗಿದೆ. ಮೊನ್ನೆ ಕಾಳುಮೆಣಸು ದರ 15 ರೂ. ಇಳಿಕೆಯಾಗಿದ್ದು ಇಂದು ಗರಿಷ್ಠ 695 ರೂ.ಗಳಷ್ಟಾಗಿತ್ತು. ನಿನ್ನೆ ಮತ್ತೆ 5 ರೂ. ಇಳಿಕೆಯಾಗಿದ್ದು 690 ಕ್ಕೆ ಬಂದಿತ್ತು. ಇಂದು ಮತ್ತೆ 5 ರೂ. ಇಳಿಕೆಯಾಗಿ 685 ರೂ.ಗೆ ಬಂದು ತಲುಪಿದೆ. ಇನ್ನು ಒಣಕೊಬ್ಬರಿ ದರ ಗರಿಷ್ಠ 175 ರೂ.ಗಳಷ್ಟೇ ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

Gold Price today: ಅಬ್ಬಬ್ಬಾ... ಚಿನ್ನದ ದರದಲ್ಲಿ ಇಂದು ಮತ್ತೆ ಭಾರೀ ಏರಿಕೆ