Select Your Language

Notifications

webdunia
webdunia
webdunia
webdunia

ಪಾಶ್ಚಿಮಾತ್ಯ ದೇಶಗಳು ಕೆಟ್ಟವೆಂಬ ಪರಿಕಲ್ಪನೆ ನೀಗಬೇಕು : ಜೈಶಂಕರ್ ಕರೆ

ಪಾಶ್ಚಿಮಾತ್ಯ ದೇಶಗಳು ಕೆಟ್ಟವೆಂಬ ಪರಿಕಲ್ಪನೆ ನೀಗಬೇಕು : ಜೈಶಂಕರ್ ಕರೆ
ನವದೆಹಲಿ , ಸೋಮವಾರ, 18 ಸೆಪ್ಟಂಬರ್ 2023 (12:24 IST)
ನವದೆಹಲಿ : ಜಾಗತಿಕ ವ್ಯಾಪಾರ ವಿಚಾರಕ್ಕೆ ಬಂದರೆ ಪಾಶ್ಚಿಮಾತ್ಯ ದೇಶಗಳು ಕೆಟ್ಟವೆಂಬ ದೃಷ್ಟಿಕೋನ ಇದೆ. ಇದು ಬದಲಾಗಬೇಕು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಕರೆ ನೀಡಿದ್ದಾರೆ.
 
ಮಲಯಾಳಂನ ಏಷ್ಯಾನೆಟ್ ಸುದ್ದಿವಾಹಿನಿಯೊಂದಿಗಿನ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಅವರು, ಈಗ ಪಶ್ಚಿಮದಿಂದ ಏಷ್ಯಾ ಮತ್ತು ಆಫ್ರಿಕನ್ ಮಾರುಕಟ್ಟೆಗಳಿಗೆ ದೊಡ್ಡ ಪ್ರಮಾಣದಲ್ಲಿ ಸರಕುಗಳು ಬಂದು ಬೀಳುತ್ತಿಲ್ಲ. ಪಶ್ಚಿಮವನ್ನು ನಕಾರಾತ್ಮಕವಾಗಿ ನೋಡುವ ಧೋರಣೆ ಬದಲಾಗುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಏಷ್ಯಾ ಮತ್ತು ಆಫ್ರಿಕಾಗೆ ದೊಡ್ಡ ಪ್ರಮಾಣದಲ್ಲಿ ಸರಕು ತಂದುಹಾಕುತ್ತಿರುವುದು ಪಶ್ಚಿಮವಲ್ಲ. ಪಶ್ಚಿಮದವರು ಕೆಟ್ಟವರು, ಅಭಿವೃದ್ಧಿಶೀಲ ದೇಶಗಳು ಒಳ್ಳೆಯವು ಎಂಬ ಹಿಂದಿನ ಪರಿಕಲ್ಪನೆಯನ್ನು ಕಳಚಿಕೊಳ್ಳುವ ಅವಶ್ಯಕತೆ ಇದೆ ಎಂಬುದು ನನ್ನ ಭಾವನೆ. ಈ ಜಗತ್ತು ಹೆಚ್ಚು ಸಂಕೀರ್ಣವಾಗಿದೆ. ಇದಕ್ಕಿಂತಲೂ ಸಮಸ್ಯೆಗಳು ಇನ್ನೂ ಹೆಚ್ಚು ಸಂಕೀರ್ಣವಾಗಿವೆ’ ಎಂದು ಜೈಶಂಕರ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದ ಹೊಸ ಆರ್ಥಿಕ ಕಾರಿಡಾರ್ಗೆ ಟರ್ಕಿ ಅಸಮಾಧಾನ