Select Your Language

Notifications

webdunia
webdunia
webdunia
webdunia

ಕೆಂಪು ಸುಂದರಿ ಆಯ್ತು.. ಈಗ ಕಣ್ಣೀರು ತರಿಸಲಿದೆ ಈರುಳ್ಳಿ

ಕೆಂಪು ಸುಂದರಿ ಆಯ್ತು.. ಈಗ ಕಣ್ಣೀರು ತರಿಸಲಿದೆ ಈರುಳ್ಳಿ
bangalore , ಸೋಮವಾರ, 14 ಆಗಸ್ಟ್ 2023 (17:24 IST)
ಗ್ರಾಹಕರಿಗೆ ಮತ್ತೇ ಹೊಸ ಟೆನ್ಷನ್ ಶುರುವಾಗಿದೆ.ಈಗಷ್ಟೆ ಜನರು ಟೊಮ್ಯಾಟೋ ಬೆಲೆ ಇಳಿತಪ್ಪ ಅಂತಾ ನಿಟ್ಟುಸಿರು ಬಿಟ್ಟಿದ್ರು. ಆದ್ರೆ ಇದೀಗ ಮತ್ತೊಂದು ಹೊಸ ಟೆನ್ಷನ್ ಸ್ಟಾರ್ಟ್ ಆಗಿದೆ. ಈಗ ಈರುಳ್ಳಿ ರೇಟ್ ಗ್ರಾಹಕರಿಗೆ ಕಣ್ಣೀರು ತರಿಸಲು ರೆಡಿಯಾದಂತೆ ಕಾಣುತ್ತಿದೆ. ಟೊಮೆಟೊ ಬಾತ್ ಎಂಟ್ರಿ ಕೊಡುತ್ತಿದ್ದಂತೆ.. ಈರುಳ್ಳಿ ದೋಸೆ ಮಾಯವಾಗ್ತಿದೆ.

 ಕೆಜಿಗೆ 15-25 ರೂ. ಇದ್ದ ಈರುಳ್ಳಿ ಈಗ 60 ರೂ.ಗೆ ಏರಿಕೆಯಾಗಿದೆ. ಈರುಳ್ಳಿ ಬೆಲೆ ಮತ್ತಷ್ಟು ಹೆಚ್ಚಾಗಬಹುದು. ಈರುಳ್ಳಿ ಬೆಲೆ ದಿಢೀರ್ ಏರಿಕೆ ಸಾಮಾನ್ಯರ ಜೇಬಿನ ಮೇಲೆ ಪರಿಣಾಮ ಬೀರಲಿದೆ. ಕಳೆದ ಕೆಲ ತಿಂಗಳಿಂದ ಟೊಮೇಟೊ ಬೆಲೆ ಜನ ಸಾಮಾನ್ಯರನ್ನು ಗೋಳಾಡಿಸಿದೆ. ಇದೀಗ ಈರುಳ್ಳಿಯೂ ದುಬಾರಿ ಆಗಿದೆ. 5 ಕೆಜಿ ಗೆ 100 ರೂಪಾಯಿ ಇದ್ದ ಈರುಳ್ಳಿ ಇದೀಗ ಡಬಲ್ ಆಗಿದೆ. ಟೊಮೇಟೊ ಬೆಲೆ ಏರಿಕೆ ಕಂಡು ಜನರು ತರಕಾರಿಗೆ ಟೊಮೆಟೊ ಹಾಕೊದನ್ನೆ ಸ್ಟಾಪ್ ಮಾಡಿದ್ರು. ಆದರೆ, ಈಗ ಜನರ ಈ ಕಷ್ಟಗಳು ಇನ್ನಷ್ಟು ಹೆಚ್ಚಾಗಲಿವೆ. ಮುಂಬರುವ ಕೆಲವೇ ದಿನಗಳಲ್ಲಿ ಈರುಳ್ಳಿ ಬೆಲೆಯೂ ಆಕಾಶ ಮುಟ್ಟಲಿದೆ. 

ಮುಂದಿನ ದಿನಗಳಲ್ಲಿ ಈರುಳ್ಳಿ ಕೆಜಿಗೆ 70 ರೂಪಾಯಿ ಅಗಲಿದ್ದು ಈ ವರ್ಷ ಹಲವೆಡೆ ಬೆಳೆ ನಾಶವಾಗಿದ್ದು, ಹೀಗಾಗಿ ಬೆಲೆ ಏರಿಕೆಯಾಗಿದೆ. ರಾಜ್ಯದಲ್ಲಿ ಮಹಾರಾಷ್ಟ್ರದ ಈರುಳ್ಳಿಯ ಮಾರಾಟ ಬಲು ಜೋರಾಗಿ ನಡೆಯುತ್ತಿದೆ. ಎರಡು ತಿಂಗಳಿಗಾಗುವಷ್ಟು ರಾಜ್ಯದಲ್ಲಿ ಈರುಳ್ಳಿ ಸ್ಟಾಕ್ ಮಾಡಿಟ್ಟುಕೊಳ್ಳಲಾಗಿದೆ. ಹೊಸ ಬೆಳೆ ಕೈಕೊಟ್ಟರೆ ಈರುಳ್ಳಿ ಬಲು ದುಬಾರಿಯಾಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಸುಮಾರು 4,000 ಹೆಕ್ಟೇರ್‌ನಲ್ಲಿ ಬೆಳೆ ಕೊರತೆಯಾಗುವ ನಿರೀಕ್ಷೆಯಿದೆ. ಮುಂಗಾರು ಮಳೆ ವಿಳಂಬವಾಗಿರುವುದರಿಂದ ಸುಮಾರು 6-8 ವಾರಗಳ ಕೊಯ್ಲು ವಿಳಂಬವಾಗಿದೆ. ಮಹಾರಾಷ್ಟ್ರದ ನಾಸಿಕ್ ನಲ್ಲಿಯೂ ಇದೇ ರೀತಿಯ ಸಮಸ್ಯೆಯಾಗಿದೆ. ಹೀಗಾಗಿ ಬೆಳೆ ಉತ್ಪಾದನೆಯಲ್ಲಿ ಕೊರತೆಗಳು ಎದುರಾಗಿದೆ ಎನ್ನುತ್ತಾರೆ ವ್ಯಾಪಾರಿಗಳು. 

Share this Story:

Follow Webdunia kannada

ಮುಂದಿನ ಸುದ್ದಿ

ಸಾಧ್ಯಕ್ಕಿಲ್ಲ ಹೊಸ ಬಿಪಿಎಲ್ ಕಾರ್ಡ್