Publish Date: Thu, 03 Aug 2023 (18:02 IST)
Updated Date: Thu, 03 Aug 2023 (18:06 IST)
ಹೋಟೆಲ್ ತಿಂಡಿಯಲ್ಲಿ ಜಿರಳೆ ನೋಡಿ ಗ್ರಾಹಕರು ಕಂಗಲಾದ ಘಟನೆ ಬೆಂಗಳೂರಿನ ರಾಜ ಮಾರ್ಕೆಟ್ನಲ್ಲಿರುವ SLV ಹೋಟೆಲ್ನಲ್ಲಿ ನಡೆದಿದೆ. ಬೆಳ್ಳಂಬೆಳಗ್ಗೆ ಮಗುವಿಗೆ ತಿಂಡಿ ತಿನ್ನಿಸಲು ಹೋಟೆಲ್ಗೆ ಹೋಗಿದ್ರು. ತಿಗಳರ ಪೇಟೆಯಿಂದ ಟಿಫಿನ್ ತೆಗೆದುಕೊಳ್ಳಲು ಗ್ರಾಹಕ ಬಂದಿದ್ದ. ಮಗುವಿಗೆ ಇಡ್ಲಿ ತಿನ್ನಿಸಲು ತೆಗೆದುಕೊಂಡಿದ್ದ ತಿಂಡಿಯಲ್ಲಿ ಜಿರಳೆ ಕಾಣಿಸಿಕೊಂಡಿದೆ. ತಿಂಡಿಯಲ್ಲಿ ಜಿರಳೆ ನೋಡಿ ಕಂಗಾಲಾಗಿ ಹೋಟೆಲ್ ಸಿಬ್ಬಂದಿಗೆ ತೋರಿಸಿದ್ದಾರೆ. ಜಿರಳೆ ಇದೆ ಅಂದ್ರೂ ಸಿಬ್ಬಂದಿ ನಿರ್ಲಕ್ಷ ತೋರಿದ್ದಾರೆ. ಗ್ರಾಹಕನಿಗೆ ಹೋಟೆಲ್ ಮಾಲೀಕರು ಬೈದು ಕಳಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ.