Publish Date: Tue, 01 Aug 2023 (20:06 IST)
Updated Date: Tue, 01 Aug 2023 (19:10 IST)
ಕಾಸ್ಟ್ಲಿ ಕಣ್ರೀ ಕಾಸ್ಟ್ಲಿ.. ಈಗ ಮುಟ್ಟಿದೆಲ್ಲವೂ ಕಾಸ್ಟ್ಲಿ.. ಹೌದು ಒಂದು ಕಡೆ ಜನರು ಉಚಿತ ವಿದ್ಯುತ್ ಜಾರಿಯ ಖುಷಿಯಲ್ಲಿದ್ರೆ, ಮತ್ತೊಂದೆಡೆ ಹಾಲು, ಹೋಟೆಲ್ ತಿಂಡಿ, ತರಕಾರಿ ದುಬಾರಿ. ಅಡುಗೆ ಮಾಡೋದು ಬೇಡ್ವೊ ಅಂತ ಜನ ಟೆನ್ಷನ್ ನಲ್ಲಿ ಕಾಲ ಕಳೆಯುವಂತಾಗಿದೆ. ತರಕಾರಿ ರೇಟ್ ಕೇಳುದ್ರೆ ಕೈ ಸುಡುತ್ತೆ, ಇನ್ನು ಕೆಂಪು ಸುಂದರಿಯನ್ನು ನೋಡುದ್ರೆ ತಲೆ ಗೀರ್ ಎನ್ನುತ್ತಿದ್ದಾರೆ ಸಾರ್ವಜನಿಕರು. ಟೊಮ್ಯಾಟೋ ಬೆಲೆ ಗಗನ ಕುಸುಮವಾಗಿದೆ. ದಿನನಿತ್ಯ ಬಳಕೆಯ ತರಕಾರಿಗಳಿಗೂ ದರದ ಬರೆ ಎದುರಾಗಿದೆ.
ನಾಡಿನ ಗೃಹಿಣಿಯರಿಗೆ ಮತ್ತೆ ಟೊಮ್ಯಾಟೊ ದರ ಏರಿಕೆಯ ಶಾಕ್ ತರಕಾರಿಗಳ ರೇಟ್ ಕೇಳಿ ಗ್ರಾಹಕರ ಜೇಬು ಸುಡುತ್ತಿದೆ. ದರ ಏರಿಕೆ ಬಿಸಿಯಿಂದ ಗ್ರಾಹಕರು ಕಂಗಾಲಾಗಿದ್ದಾರೆ. ಇನ್ನು ಕಳೆದ ಕೆಲವು ದಿನಗಳ ಹಿಂದೆ ಶತಕ ದಾಟಿದ ಟೊಮ್ಯಾಟೋ ಇದೀಗ ಮತ್ತಷ್ಟು ದುಬಾರಿಯಾಗಿದೆ. ೧೪೦ ರಿಂದ ೧೬೦ಕ್ಕೆ ಬಂದಿದೆ. ಟೊಮ್ಯಾಟೊ ಮಾರಾಟಗಾರರಿಗೆ ಶುಕ್ರದೆಸೆ ಶುರುವಾಗಿದ್ರೆ, ಟೊಮ್ಯಾಟೊ ಪ್ರಿಯರಿಗೆ ವಕ್ರದೆಸೆ ಎದುರಾಗಿದೆ.