Select Your Language

Notifications

webdunia
webdunia
webdunia
webdunia

ಹಾಲು ದುಬಾರಿ.. ಕಾಫೀ ಟಿ ಕೂಡ ದುಬಾರಿ

Milk
bangalore , ಮಂಗಳವಾರ, 1 ಆಗಸ್ಟ್ 2023 (19:00 IST)
ರಾಜ್ಯದ ಜನರಿಗೆ ತಿಂಗಳ ಆರಂಭದಲ್ಲೇ ಶಾಕ್ ಮೇಲೆ ಶಾಕ್ ಸಿಗುತ್ತಿದೆ. ಒಂದು ಕಡೆ ತರಕಾರಿ ಆಯ್ತು. ಇದೀಗ ಹಾಲು ದುಬಾರಿ. ಇನ್ನು ಇಷ್ಟಕ್ಕೆ ಫುಲ್ ಸ್ಟಾಪ್ ಹಾಕದೇ ಹೋಟೆಲ್ ನಲ್ಲಿನ ಪ್ರೈಸ್ ಕೂಡ ಜಾಸ್ತಿ. ಅಬ್ಬಾ ಇಷ್ಟೆಲ್ಲಾ ದುಬಾರಿ ದುನಿಯಾದಲ್ಲಿ ಹೆಂಗಪ್ಪ ಜೀವನ ಅಂತಾ ಜನ ಫುಲ್ ಶಾಕ್ ಆಗ್ಬಿಟ್ಟಿದ್ದಾರೆ.ಒಂದು ಕಡೆ ಹಾಲಿನ ದರ ಏರಿಕೆಯ ಬಿಸಿ.. ಇನ್ನೊಂದು ಕಡೆ ಹೋಟೆಲ್ ತಿನಿಸುಗಳು ಕೂಡ ದುಬಾರಿ. ಹೌದು ನಂದಿನಿ ಹಾಲಿನ ದರ ಏರಿಕೆ ಇಂದಿನಿಂದ ಅಂದರೆ ಜಾರಿಗೆ ಬಂದಿದೆ. ಹಾಲು ಉತ್ಪಾದಕರ ಬೇಡಿಕೆ ಹಿನ್ನೆಲೆಯಲ್ಲಿ ನಂದಿನಿ ಹಾಲಿನ ಬೆಲೆ ಹೆಚ್ಚಳಕ್ಕೆ ರಾಜ್ಯ ಸರಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಜನತೆಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಿದೆ. ಹೈನುಗಾರರಿಗೆ ಈ ದರ ಏರಿಕೆ ಒಂದಿಷ್ಟು ನಿಟ್ಟುಸಿರು ಬಿಡುವಂತೆ ಮಾಡಿದರೇ, ಇತ್ತ ಸಾಮಾನ್ಯ ಜನರ ಜೇಬಿಗೆ ಕತ್ತರಿ ಬಿದ್ದಂತಾಗಿದೆ. 

ಇನ್ನು ಹಾಲು, ದಿನಸಿ ಸೇರಿದಂತೆ ಇತರೆ ಬೆಲೆಗಳ ಏರಿಕೆ ಹಿನ್ನೆಲೆಯಲ್ಲಿ ಹೋಟೆಲ್‌ಗಳಲ್ಲಿ ಎಲ್ಲಾ ತಿಂಡಿ, ತಿನಿಸುಗಳ ದರವನ್ನು ಶೇ. 10ರಷ್ಟು ಹೆಚ್ಚಳ ಮಾಡಿದೆ. ಕಾಫಿ, ಟೀ, ಉಪಾಹಾರ, ಊಟ, ಚಾಟ್ಸ್‌ ಸೇರಿದಂತೆ ಎಲ್ಲ ಆಹಾರ ಪದಾರ್ಥಗಳ ದರ ಶೇ. 10ರಷ್ಟು ಹೆಚ್ಚಾಗಿದೆ. ಕಾಫಿ, ಟೀ ದರವು 2 ರಿಂದ 3 ರೂವರೆಗೆ ಜಾಸ್ತಿಯಾಗಿದೆ. ಹಾಗೆಯೇ, ದೋಸೆ, ಇಡ್ಲಿ, ವಡೆ, ರೈಸ್‌ಬಾತ್‌, ಬಿಸಿಬೇಳೆ ಬಾತ್‌, ಚೌಚೌ ಬಾತ್‌ ಮತ್ತಿತರ ತಿಂಡಿಗಳ ಬೆಲೆಯೂ 5 ರೂಪಾಯಿಯಷ್ಟು ಹೆಚ್ಚಾಗಿದೆ. ಊಟದ ದರವನ್ನು 5 ರಿಂದ 10 ರೂಪಾಯಿ ವರೆಗೆ ಏರಿಕೆ ಮಾಡಲು ಬೃಹತ್‌ ಬೆಂಗಳೂರು ಹೋಟೆಲ್‌ ಮಾಲೀಕರ ಸಂಘ ತೀರ್ಮಾನಿಸಿದೆ. 

ಯಾವ ಯಾವ ಹಾಲಿನ ಉತ್ಪನ್ನಗಳಿಗೆ ನೂತನ ದರ ಎಷ್ಟು ಅಂತಾ ನೋಡೋದಾದ್ರೆ..?
 
ಟೋಲ್ಡ್ ಮಿಲ್ಕ್ - 39 ಯಿಂದ 42
ಹೋಮೋಜೆನೈಸ್ಡ್ - 40 ಯಿಂದ 43
ಶುಭಂ ಹಾಲು -  45 ಯಿಂದ 48
ಮೊಸರು-  47 ಯಿಂದ 50 
ಮಜ್ಜಿಗೆ 200ml - 8 ಯಿಂದ 9
 
ಹೋಟೆಲ್ ಆಹಾರ ದರ ಎಷ್ಟು ಅಂತಾ ನೋಡೋದಾದ್ರೆ..?
 
ಊಟ -  100 ರಿಂದ 105 ಅಥವಾ 110
ಪೂರಿ (3)- 60 ರಿಂದ 65
ರೈಸ್ ಬಾತ್- 50 ರಿಂದ 55
ಚೌಚೌಬಾತ್-45 ರಿಂದ 55
ಇಡ್ಲಿ ವಡಾ - 60 ರಿಂದ 65
ಕಾಫಿ- ಟೀ - 18 ರಿಂದ 20
ಸಿಲಿಕಾನ್ ಸಿಟಿ ಮಂದಿಗೆ ಇನ್ನು ಮುಂದೆ ಹೋಟೆಲ್ ಊಟ ತಿಂಡಿ ಖಾರ ಖಾರವಾಗಲಿದೆ. ಇನ್ನು ಸತತ ಬೆಲೆ ಏರಿಕೆಯಿಂದಾಗಿ ನಷ್ಟ ಅನುಭವಿಸುತ್ತಿರುವ ಹೋಟೆಲ್ ಉದ್ಯಮಿಗಳು ಬೆಲೆ ಏರಿಕೆಗೆ ಮುಂದಾಗಿದ್ದಾರೆ ಎನ್ನುತ್ತಾರೆ. ಬೆಲೆ ಏರಿಕೆ ಸಾಧ್ಯತೆ ಹೆಚ್ಚಿದ್ದು ಸಾಮಾನ್ಯನ ಜೇಬಿಗೆ ಕತ್ತರಿ ಬೀಳುತ್ತಿದೆ ಎಂದು ಜನ ಸಾಮಾನ್ಯರು ಆಕ್ರೋಶ ಹೊರಹಾಕುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಬರಿಗೆ ಸ್ಪೂರ್ತಿಯಾಗಿದ್ದು, ಧೂಮ್ 2, ದೃಶ್ಯಂ ಸಿನಿಮಾಗಳು ..!