ದೊಡ್ಮನೆ ಅಂತಂದ್ರೆನೇ ಹಾಗೆ ಅಣ್ಣವರ ಕಾಲದಿಂದಲೂ ಕೂಡ ಸದಾ ಸಮಾಜಮುಖಿ ಕೆಲಸಗಳನ್ನೇ ಮಾಡುತ್ತಾ ಬಂದಿದೆ. ಅನ್ನದಾತರು, ಬಡವರು, ನಾಡಿನ ಜನತೆಗಾಗಿ ಸದಾ ಹೋರಾಟವನ್ನೇ ಮಾಡಿಕೊಂಡು ನೊಂದವರ ಬೆನ್ನಿಗೆ ನಿಲ್ಲುತ್ತಾ ಬಂದವರು. ಅವರ ಹಾದಿಯಲ್ಲೆ ಅವರ ಮಕ್ಕಳಾದ ರಾಘವೇಂದ್ರ ರಾಜಕುಮಾರ್ ಆಗಬಹುದು ಪುನೀತ್ ರಾಜಕುಮಾರ್ ಹಾಗೂ ಶಿವರಾಜ್ ಕುಮಾರ್ ಯಲ್ಲರೂ ಕೂಡ ಇಂದಿಗೂ ಅದೇ ಹಾದಿಯನ್ನೇ ಮುಂದುವರೆಸಿಕೊಂಡು ಬಂದಿದ್ದಾರೆ. ಇದೀಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮಹತ್ವದ ನಿರ್ಧಾರವನ್ನು ಮಾಡಿದ್ದು, ನಂದಿನಿ ಉತ್ಪನ್ನಗಳ ರಾಯಭಾರಿ ಯಾಗಲ್ಲೂ ನಟ ಶಿವರಾಜ್ಕುಮಾರ್ ಒಪ್ಪಿಗೆ ನೀಡಿದ್ದು, ನಮ್ಮ ನಾಡಿನ ಅನ್ನದಾತರ ಬೆನ್ನಿಗೆ ನಿಲ್ಲಲು ಮುಂದಾಗಿದ್ದಾರೆ.
ಡಾ. ರಾಜ್ಕುಮಾರ್ ಅವರು ಕೂಡ 1996ರಲ್ಲಿ ನಂದಿನಿ ಉತ್ಪನ್ನದ ರಾಯಭಾರಿ ಆಗಿದ್ದರು. ರೈತರಿಗೆ ಸಹಕಾರಿ ಆಗುತ್ತದೆ ಎಂಬ ಉದ್ದೇಶದಿಂದ ಅಣ್ಣವರು ಪ್ರಚಾರಕ್ಕೆ ಯಾವುದೇ ಸಂಭಾವನೆ ಪಡೆದಿರಲಿಲ್ಲ. ಅವರ ಹಾದಿಯಲ್ಲಿ ಕರ್ನಾಟಕ ರತ್ನ ಅಭಿಮಾನಿಗಳ ದೇವರು ಡಾ. ಪುನೀತ್ ರಾಜಕುಮಾರ್ ಅವರು ಕೂಡ ಸಾಗಿದ್ದರು. ಅವರು ಹಲವು ವರ್ಷಗಳ ಕಾಲ ನಮ್ಮ ಹೆಮ್ಮೆಯ ನಂದಿನಿ ಪ್ರಾಡಕ್ಟ್ಗಳ ಪ್ರಚಾರದಲ್ಲಿ ಭಾಗಿ ಆಗಿದ್ದರು. ಇದಕ್ಕಾಗಿ ಅವರು ಯಾವುದೇ ಸಂಭಾವನೆ ಪಡೆದಿರಲಿಲ್ಲ ಎಂಬ ಸುದ್ದಿ ಅವರ ಸಾವಿನ ಬಳಿಕ ಕೇಳಿ ಬಂದಿತ್ತು. ಇದೀಗ ಅಂತಹದ್ದೇ ಮತ್ತೊಂದು ಮಹತ್ವದ ಕಾರ್ಯಕ್ಕೆ ದೊಡ್ಮನೆ ಮುಂದಾಗಿದ್ದು, ಕರುನಾಡ ಅನ್ನದಾತರ ಬೆನ್ನಿಗೆ ನಿಲ್ಲಲು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಮುಂದಾಗಿದ್ದಾರೆ. ಹೌದು ವೀಕ್ಷಕರೇ… ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಹಾಗೂ ಎಂಡಿ ಜಗದೀಶ್ ಅವರು ಶಿವರಾಜ್ ಕುಮಾರ್ ಅವರಿಗೆ ನಂದಿನಿ ಉತ್ಪನ್ನಗಳ ರಾಯಭಾರಿಯಾಗುವಂತೆ ಮನವಿ ಮಾಡಿದ್ದರು ಇದೀಗ ಮನವಿಗೆ ಮನವಿಗೆ ನಟ ಶಿವರಾಜಕುಮಾರ್ ಸ್ಪಂದಿಸಿದ್ದು, ಶಿವಣ್ಣಗೆ ಅವರಿಗೆ KMFಅಧ್ಯಕ್ಷ ಭೀಮಾನಾಯ್ಕ್ ಹೂಗುಚ್ಛ ನೀಡಿ ಅಭಿನಂದಿಸಿದ್ದಾರೆ.