ನವದೆಹಲಿ: ಸಿನಿಮಾ ರಂಗದಲ್ಲಿ ಪೈರಸಿ ಕಾಟ ಮಿತಿ ಮೀರುತ್ತಿದೆ. ಇದರಿಂದಾಗಿ ನಿರ್ಮಾಪಕರು, ವಿತರಕರು ತೀವ್ರ ನಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಇಂತಹ ವೆಬ್ ಸೈಟ್ ಗಳಿಗೆ ಕಡಿವಾಣ ಹಾಕಲು ಕೇಂದ್ರ ಮುಂದಾಗಿದೆ.
ಲೋಕಸಭೆಯಲ್ಲಿ ಸಿನಿಮಾಟೋಗ್ರಫಿ ಬಿಲ್ 2023 ಮಂಡಿಸಿದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಪೈರಸಿ ಮಾಡುವವರಿಗೆ ಕೋಟಿಗಟ್ಟಲೆ ದಂಡ ಮತ್ತು ಅಂತಹ ವೆಬ್ ಸೈಟ್ ಗಳನ್ನು ಬ್ಲಾಕ್ ಮಾಡುವುದಾಗಿ ಹೇಳಿದ್ದಾರೆ.
ಯಾವುದೇ ಸಿನಿಮಾವನ್ನು ಪೈರಸಿ ಮಾಡಿದರೆ ಆ ಸಿನಿಮಾದ ಶೇ.5 ರಷ್ಟು ಬಜೆಟ್ ಮೊತ್ತವನ್ನು ದಂಡವಾಗಿ ತೆರಬೇಕು. ಇದರ ಜೊತೆಗೆ ಗರಿಷ್ಠ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಚಿತ್ರರಂಗದ ಬಹುಕಾಲದ ಬೇಡಿಕೆಯನ್ನು ಕೇಂದ್ರ ಪೂರೈಸುತ್ತಿದೆ ಎಂದು ಸಚಿವರು ಹೇಳಿದ್ದಾರೆ.