Select Your Language

Notifications

webdunia
webdunia
webdunia
webdunia

ಸಿಸಿಟಿವಿ ಕಣ್ಗಾವಲಿನಲ್ಲಿ ಟೊಮ್ಯಾಟೊ ವ್ಯಾಪಾರ

ಸಿಸಿಟಿವಿ ಕಣ್ಗಾವಲಿನಲ್ಲಿ ಟೊಮ್ಯಾಟೊ ವ್ಯಾಪಾರ
ಹಾವೇರಿ , ಶುಕ್ರವಾರ, 7 ಜುಲೈ 2023 (20:20 IST)
ತರಕಾರಿ ಬೆಲೆ ಗಗನಕ್ಕೇರಿದ ಹಿನ್ನಲೆ ವ್ಯಾಪಾರಸ್ಥರು ಫುಲ್ ಅಲರ್ಟ್ ಆಗಿದ್ದು, ಸಿಸಿಟಿವಿ ಕಣ್ಗಾವಲಿನಲ್ಲಿ ಟೊಮ್ಯಾಟೊ ಮಾರುತ್ತಿದ್ದಾರೆ ಹಾವೇರಿಯ ಹಾನಗಲ್ ತಾಲೂಕಿನ ಅಕ್ಕಿಆಲೂರು ಗ್ರಾಮದಲ್ಲಿ ರೈತ ಕೃಷ್ಣಪ್ಪ ಸಿಸಿ ಕ್ಯಾಮೆರಾ ಅಳವಡಿಸಿ ಟೊಮ್ಯಾಟೊ ವ್ಯಾಪಾರ ಮಾಡುತ್ತಿದ್ದಾರೆ. 1 ಕೆ.ಜಿ ಟೊಮ್ಯಾಟೊಗೆ 150 ರೂಪಾಯಿ ಬೆಲೆ ಏರಿಕೆಯಾದ ಹಿನ್ನೆಲೆ, ಟೊಮ್ಯಾಟೊ ಕಳ್ಳತನ ಆಗದಂತೆ ವ್ಯಾಪಾರಸ್ಥ ಎಚ್ಚರ ವಹಿಸಿದ್ದಾನೆ. ಪವರ್ ಟಿವಿ ಜೊತೆ ಮಾತನಾಡಿದ ವ್ಯಾಪಾರಸ್ಥ ಕೃಷ್ಣಪ್ಪ, ಖರೀದಿ ನೆಪದಲ್ಲಿ ಜನರು ಟೊಮ್ಯಾಟೊವನ್ನು ಒಂದೊಂದು ಹೆಚ್ಚಿಗೆ ಹಾಕಿಕೊಳ್ಳುತ್ತಾರೆ. ಹೀಗಾಗಿ ಟೊಮ್ಯಾಟೊ ಕದಿಯದಂತೆ ಸಿಸಿಟಿವಿ ಅಳವಡಿಸಿದ್ದೇನೆ. ಇವತ್ತಿನ ಬೆಲೆಗೆ 1-2 ಟೊಮ್ಯಾಟೋ ಕದ್ದರೂ ನಷ್ಟವಾಗುತ್ತದೆ ಎಂದು ತಿಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಜುಲೈ 7 ರಿಂದ ಆಗಸ್ಟ್ 9 ರವರೆಗೆ ಕೆಲವೆಡೆ ಮೆಟ್ರೋ ಸ್ಥಗಿತ