Select Your Language

Notifications

webdunia
webdunia
webdunia
webdunia

ಶಿಕ್ಷಣ ಸಚಿವರ ಎಂಟ್ರಿ ಬಳಿಕ ಮುಷ್ಕರಕ್ಕೆ ಬ್ರೇಕ್

ಶಿಕ್ಷಣ ಸಚಿವರ ಎಂಟ್ರಿ ಬಳಿಕ ಮುಷ್ಕರಕ್ಕೆ ಬ್ರೇಕ್
bangalore , ಶುಕ್ರವಾರ, 7 ಜುಲೈ 2023 (19:50 IST)
ನೇಮಕಾತಿ ಆದೇಶ ಕೊಡಿ ಅಂತಾ ಪಟ್ಟುಹಿಡಿದಿದ್ದ ಭಾವಿ ಶಿಕ್ಷಕರ ಬಳಿಗೆ ಇಂದು ಓಡೋಡಿ ಬಂದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಪ್ರತಿಭಟನಾಕಾರರ ಕಿಡಿ ಶಮನ ಮಾಡೋದರಲ್ಲಿ ಯಶಸ್ಸು ಕಂಡಿದ್ದಾರೆ. ಕಳೆದ ನಾಲ್ಕು ದಿನದಿಂದ ಪ್ರತಿಭಟನಾಸ್ಥಳಕ್ಕೆ ಸುಳಿಯದ ಸಚಿವರು, ಇಂದು ಭೇಟಿ ನೀಡಿ ಈ ವಿಚಾರ ಕೋರ್ಟ್ ನಲ್ಲಿದೆ ಆದಷ್ಟು ಬೇಗ ಎಲ್ಲಾ ಸರಿಪಡಿಸಲು ಪ್ರಯತ್ನಿಸುತ್ತೇನೆ ಅಂತಾ ಭರವಸೆ ನೀಡಿದ್ದಾರೆ.ಸದ್ಯ ಮನೆ-ಮಠ ಬಿಟ್ಟು ಹಕ್ಕಿಗಾಗಿ ಹಠ ಹಿಡಿದಿದ್ದ ಭಾವಿ ಶಿಕ್ಷಕರು, ಶಿಕ್ಷಣ ಸಚಿವರ ಭರವಸೆ ಬಳಿಕ ಒಲ್ಲದ ಮನಸ್ಸಿನಿಂದಲೇ ಪ್ರತಿಭಟನೆಯನ್ನ ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ. ಅಲ್ಲದೇ ತಮ್ಮ ಮುಷ್ಕರಕ್ಕೆ ಬೆಂಬಲ ನೀಡಿದ ಸರ್ಕಾರ ಕೊಟ್ಟ ಭರವಸೆ ಈಡೇರಿಸದಿದ್ರೆ ಮತ್ತೆ ಪ್ರತಿಭಟನೆ ನಡೆಸೋ ಎಚ್ಚರಿಕೆ ಕೊಟ್ಟಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಹಿಂದಿನ‌ ಸರ್ಕಾರದ ಬಜೆಟ್ ಮುಂದುವರೆಸಿದ್ದಾರೆ ವಿಪಕ್ಷಗಳ ವಾಗ್ದಾಳಿ..!