Select Your Language

Notifications

webdunia
webdunia
webdunia
webdunia

ಭಾರತದ ಹೊಸ ಆರ್ಥಿಕ ಕಾರಿಡಾರ್ಗೆ ಟರ್ಕಿ ಅಸಮಾಧಾನ

ಭಾರತದ ಹೊಸ ಆರ್ಥಿಕ ಕಾರಿಡಾರ್ಗೆ ಟರ್ಕಿ ಅಸಮಾಧಾನ
ಅಂಕಾರ , ಸೋಮವಾರ, 18 ಸೆಪ್ಟಂಬರ್ 2023 (12:06 IST)
ಅಂಕಾರ : ಏಷ್ಯಾ ಮತ್ತು ಯೂರೋಪ್ ಮಧ್ಯೆ ಹೊಸ ಆರ್ಥಿಕ ಕಾರಿಡಾರ್ ಸ್ಥಾಪನೆಗೆ ಟರ್ಕಿ ವಿವಿಧ ಮಾರ್ಗೋಪಾಯಗಳನ್ನು ಅವಲೋಕಿಸುತ್ತಿದೆ. ಈ ನಿಟ್ಟಿನಲ್ಲಿ ವಿವಿಧ ದೇಶಗಳ ಜೊತೆ ಟರ್ಕಿ ಮಾತುಕತೆಗೆ ಮುಂದಾಗಿರುವ ಸಂಗತಿ ಬೆಳಕಿಗೆ ಬಂದಿದೆ.

ಜಿ20 ಶೃಂಗಸಭೆಯಲ್ಲಿ ಭಾರತ, ಮಧ್ಯಪ್ರಾಚ್ಯ ಮತ್ತು ಯೂರೋಪ್ ಮಧ್ಯೆ ಆರ್ಥಿಕ ಕಾರಿಡಾರ್ ಯೋಜನೆ ಘೋಷಣೆ ಆದ ಬಳಿಕ ಟರ್ಕಿ ಚುರುಕುಗೊಂಡಿದೆ. ತಾನಿಲ್ಲದೇ ಇಲ್ಲದೇ ಏಷ್ಯಾ ಮತ್ತು ಯೂರೋಪ್ ನಡುವಿನ ವ್ಯಾಪಾರ ಮಾರ್ಗ ಹೇಗೆ ಸಾಧ್ಯ ಎಂಬುದು ಟರ್ಕಿ ಪ್ರಶ್ನೆ. ಜಿ20 ಶೃಂಗ ಸಭೆ ಬಳಿಕ ಟರ್ಕಿ ಅಧ್ಯಕ್ಷ ರೆಸೆಪ್ ಟಯ್ಯಿಪ್ ಎರ್ಡೋಗನ್ ಕೂಡ ಈ ಬಗ್ಗೆ ಚಕಾರ ಎತ್ತಿದ್ದರು.

‘ಟರ್ಕಿ ಇಲ್ಲದೇ ಯಾವ ಕಾರಿಡಾರ್ ಸಾಧ್ಯ ಇಲ್ಲ. ಪೂರ್ವ ಮತ್ತು ಪಶ್ಚಿಮದ ಮಧ್ಯೆ ಸೂಕ್ತ ವ್ಯಾಪಾರ ಮಾರ್ಗ ಬೇಕೆಂದರೆ ಅದು ಟರ್ಕಿ ಮೂಲಕವೇ ಹಾದುಹೋಗಬೇಕು’ ಎಂಬುದು ಎರ್ಡೋಗನ್ ಅಭಿಪ್ರಾಯ.

ಬಹಳ ಕಾಲದಿಂದಲೂ ಏಷ್ಯಾದಿಂದ ಯೂರೋಪ್ಗೆ ಸರಕುಗಳು ಸಾಗಿ ಹೋಗುತ್ತಿದ್ದ ಮಾರ್ಗದಲ್ಲಿ ಟರ್ಕಿಯೂ ಒಂದು ಭಾಗವಾಗಿದೆ. ಪೂರ್ವ ಮತ್ತು ಪಶ್ಚಿಮಕ್ಕೆ ಟರ್ಕಿ ಕೊಂಡಿಯಾಗುತ್ತಾ ಬಂದಿದೆ. ಅದೇ ಸ್ಥಿತಿ ಮುಂದುವರಿಯಬೇಕೆಂಬುದು ಅದರ ಇರಾದೆ.

ಸದ್ಯ, ಪೂರ್ವ ಮತ್ತು ಪಶ್ಚಿಮದ ಮಧ್ಯೆ ವ್ಯಾಪಾರ ಮಾರ್ಗ ಸೃಷ್ಟಿಸಲು ಚೀನಾ ಸಿಲ್ಕ್ ರೋಡ್ ಯೋಜನೆ ಕೈಗೆತ್ತಿಕೊಂಡಿದೆ. ಭಾರತದ ನೇತೃತ್ವದಲ್ಲಿ ಹೊಸ ಮಾರ್ಗ ಸೃಷ್ಟಿಯಾಗುತ್ತಿದೆ. ಭಾರತ, ಯುಎಇ, ಸೌದಿ ಅರೇಬಿಯಾ, ಜೋರ್ಡಾನ್, ಇಸ್ರೇಲ್ ಮೂಲಕ ಯೂರೋಪ್ ದೇಶಗಳಿಗೆ ಈ ಹೊಸ ಆರ್ಥಿಕ ಕಾರಿಡಾರ್ ಸಾಗುವ ಪ್ರಸ್ತಾಪ ಇದೆ. ಐರೋಪ್ಯ ದೇಶವಾಗಿರುವ ಟರ್ಕಿ ಭಾರತದ ಕಾರಿಡಾರ್ ಪ್ರಾಜೆಕ್ಟ್ ಅನ್ನ ವಿರೋಧಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೀನು ತಿಂದು ದೇಹದ ಅಂಗಾಂಗ ಕಳೆದುಕೊಂಡ ಮಹಿಳೆ!?