Select Your Language

Notifications

webdunia
webdunia
webdunia
webdunia

ವ್ಯಾಪಾರಿಗಳು ಗ್ರಾಹಕರ ಮೊಬೈಲ್ ನಂಬರ್ ಕೇಳುವಂತಿಲ್ಲ : ಕೇಂದ್ರ ಸರ್ಕಾರ

ವ್ಯಾಪಾರಿಗಳು ಗ್ರಾಹಕರ ಮೊಬೈಲ್ ನಂಬರ್ ಕೇಳುವಂತಿಲ್ಲ : ಕೇಂದ್ರ ಸರ್ಕಾರ
ನವದೆಹಲಿ , ಶುಕ್ರವಾರ, 26 ಮೇ 2023 (11:26 IST)
ನವದೆಹಲಿ : ಅಂಗಡಿಗಳಲ್ಲಿ ಸೇವೆಗಳನ್ನು ಒದಗಿಸುವ ಸಲುವಾಗಿ ಗ್ರಾಹಕರ ವೈಯಕ್ತಿಕ ಸಂಪರ್ಕ ವಿವರಗಳನ್ನು ಕೊಡಲು ಒತ್ತಾಯಿಸದಂತೆ ಗ್ರಾಹಕರ ವ್ಯವಹಾರಗಳ ಸಚಿವಾಲಯವು ಚಿಲ್ಲರೆ ವ್ಯಾಪಾರಿಗಳಿಗೆ ಸೂಚನೆ ನೀಡಿದೆ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.
 
ಯಾವುದೇ ಅಂಗಡಿಗಳಿಗೆ ಹೋದರೂ ಬಿಲ್ ಕೊಡುವ ಮೊದಲು ಮೊಬೈಲ್ ನಂಬರ್ ಕೊಡುವಂತೆ ಕೇಳುತ್ತಾರೆ. ಗ್ರಾಹಕರು ತಮ್ಮ ವೈಯಕ್ತಿಕ ನಂಬರ್ ಕೊಡಲು ಒಪ್ಪದಿದ್ದಾಗ ಅವರಿಗೆ ಸೇವೆಗಳನ್ನು ಒದಗಿಸಲಿಲ್ಲ ಎಂದು ಹಲವು ಗ್ರಾಹಕರು ದೂರು ನೀಡಿದ್ದರು. ಗ್ರಾಹಕರು ನೀಡಿದ ದೂರಿನ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. 

ವೈಯಕ್ತಿಕ ಸಂಪರ್ಕ ವಿವರಗಳನ್ನು ಕೊಡುವವರೆಗೆ ಬಿಲ್ ಕೊಡಲಾಗುವುದಿಲ್ಲ ಎಂದು ಮಾರಾಟಗಾರರು ಹೇಳುತ್ತಾರೆ. ಗ್ರಾಹಕರ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಇದು ನಿರ್ಬಂಧಿತ ವ್ಯಾಪಾರ ಪದ್ಧತಿಯಾಗಿದ್ದು, ಮಾಹಿತಿ ಸಂಗ್ರಹಿಸಲು ಗ್ರಾಹಕರನ್ನು ಒತ್ತಾಯಿಸುವಂತಿಲ್ಲ. ಅಲ್ಲದೇ ಗೌಪ್ಯತೆ ಕಪಾಡುವ ಸಲುವಾಗಿ ಚಿಲ್ಲರೆ ಉದ್ಯಮ ಮತ್ತು ಉದ್ಯಮ ಚೇಂಬರ್ಗಳಾದ ಸಿಐಐ ಹಾಗೂ ಎಫ್ಐಸಿಸಿಐಗಳಿಗೆ ಸೂಚನೆ ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ. 

 

Share this Story:

Follow Webdunia kannada

ಮುಂದಿನ ಸುದ್ದಿ

ಸಿಬಿಐ ನಿರ್ದೇಶಕರಾಗಿ ಪ್ರವೀಣ್ ಸೂದ್ ಅಧಿಕಾರ ಸ್ವೀಕಾರ