Select Your Language

Notifications

webdunia
webdunia
webdunia
Thursday, 3 April 2025
webdunia

ಆಟವಾಡುವ ಉಯ್ಯಾಲೆಯೇ ಮುಳುವಾಯ್ತು!

ಉಯ್ಯಾಲೆ
ಲಕ್ನೋ , ಭಾನುವಾರ, 22 ಮೇ 2022 (12:10 IST)
ಲಕ್ನೋ : ಉಯ್ಯಾಲೆಯ ಹಗ್ಗಕ್ಕೆ ಸಿಲುಕಿ ಎಂಟು ವರ್ಷದ ಬಾಲಕ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಬಸ್ರೇಹಿ ಗ್ರಾಮದಲ್ಲಿ ನಡೆದಿದೆ.
 
ಮೃತ ದುರ್ದೈವಿಯನ್ನು ಅರ್ಜುನ್ ಎಂದು ಗುರುತಿಸಲಾಗಿದೆ. ಅರ್ಜುನ್ ಮನೆಯ ಕೊಠಡಿಯೊಂದರಲ್ಲಿ ಹಗ್ಗದಲ್ಲಿ ಉಯ್ಯಾಲೆ ಮಾಡಿಕೊಂಡು ಆಟವಾಡುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಎಸ್ಎಚ್ಒ ಉಮಾಕಾಂತ್ ಓಜಾ ತಿಳಿಸಿದ್ದಾರೆ.

ಅರ್ಜುನ್ ಕೊಠಡಿಯಲ್ಲಿ ಕೆಲವು ಗೋಧಿ ಚೀಲಗಳನ್ನು ಒಂದರ ಮೇಲೊಂದರಂತೆ ಜೋಡಿಸಿ ನಂತರ ಅದರ ಮೇಲೆ ನಿಂತು ಫ್ಯಾನ್ಗೆ ಹಗ್ಗವನ್ನು ನೇತು ಹಾಕಿದ್ದಾನೆ. ಬಳಿಕ ತೂಗಾಡಲು ಆರಂಭಿಸಿದಾಗ, ಕೆಳಗೆ ಇದ್ದ ಗೋಣಿಚೀಲಗಳು ಚೆಲ್ಲಾಪಿಲ್ಲಿಯಾಗಿದೆ. ಇದರಿಂದ ನಿಯಂತ್ರಣ ಕಳೆದುಕೊಂಡ ಬಾಲಕನ ಕುತ್ತಿಗೆಗೆ ಹಗ್ಗ ಸುತ್ತಿಕೊಂಡು ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ.

ನಂತರ ನೇಣು ಬಿಗಿದಂತೆ ಪತ್ತೆಯಾದ ಬಾಲಕನನ್ನು ಕೂಡಲೇ ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಸ್ಮಾಲ್‌ಪಾಕ್ಸ್‌ ಲಸಿಕೆಯಿಂದ ರಕ್ಷಣೆ