Select Your Language

Notifications

webdunia
webdunia
webdunia
webdunia

ಸ್ಮಾಲ್‌ಪಾಕ್ಸ್‌ ಲಸಿಕೆಯಿಂದ ರಕ್ಷಣೆ

ಸ್ಮಾಲ್‌ಪಾಕ್ಸ್‌ ಲಸಿಕೆಯಿಂದ ರಕ್ಷಣೆ
ನವದೆಹಲಿ , ಭಾನುವಾರ, 22 ಮೇ 2022 (11:06 IST)
ಮಂಕಿಪಾಕ್ಸ್ ಸಾಮಾನ್ಯವಾಗಿ ಸೌಮ್ಯ ಸ್ವಭಾವದ್ದಾಗಿರುವುದರಿಂದ ಹೆಚ್ಚಿನ ಜನರು ಕೆಲ ವಾರಗಳಲ್ಲಿ ಚೇತರಿಸಿಕೊಳ್ಳುತ್ತಾರೆ.

ಜನರ ನಡುವೆ ವೈರಸ್ ಅಷ್ಟು ಸುಲಭವಾಗಿ ಹರಡುವುದಿಲ್ಲ. ಹೀಗಾಗಿ ಸಾರ್ವಜನಿಕರಲ್ಲಿ ವ್ಯಾಪಕವಾಗಿ ಹರಡುವ ಅಪಾಯ ಬಹಳ ಕಡಿಮೆ ಎಂದು ವರದಿ ಹೇಳಿದೆ.

ಮಂಕಿಪಾಕ್ಸ್ ವೈರಸ್ಗೆ ನಿರ್ದಿಷ್ಟ ಲಸಿಕೆ ಇಲ್ಲ. ಆದರೆ ಸ್ಮಾಲ್ಪಾಕ್ಸ್ಗೆ ಬಳಸುವ ಲಸಿಕೆಯು ಶೇ.85 ರಷ್ಟು ರಕ್ಷಣೆ ನೀಡುತ್ತದೆ.

ಈ ಎರಡೂ ವೈರಸ್ಗಳ ಮಧ್ಯೆ ಬಹಳ ಸಾಮ್ಯತೆ ಇದೆ. ಇಲ್ಲಿಯವರೆಗೆ, ವೈರಸ್ ಹೆಚ್ಚಾಗಿ ಆಫ್ರಿಕಾಕ್ಕೆ ಸೀಮಿತವಾಗಿತ್ತು. ಈಗ ಯುರೋಪ್ನ ಬ್ರಿಟನ್, ಸ್ಪೇನ್, ಪೋರ್ಚುಗಲ್, ಜರ್ಮನಿ, ಬೆಲ್ಜಿಯಂ, ಫ್ರಾನ್ಸ್, ನೆದರ್ಲ್ಯಾಂಡ್ಸ್, ಇಟಲಿ ಮತ್ತು ಸ್ವೀಡನ್ಗಳಲ್ಲಿ ಖಚಿತವಾಗಿದೆ.

ಗಾಳಿಯಲ್ಲಿ ಹರಡುವುದಿಲ್ಲ

ಮಂಕಿಪಾಕ್ಸ್ ಸೋಂಕು ಗಾಳಿಯಲ್ಲಿ ಹರಡುವುದಿಲ್ಲ. ಇದಕ್ಕೆ ವೈಜ್ಞಾನಿಕ ಆಧಾರವೂ ಇಲ್ಲ. ಅಲ್ಲದೆ ಲೈಂಗಿಕ ಸಂಪರ್ಕ ಇದ್ದವರಲ್ಲೂ ಪತ್ತೆಯಾಗುತ್ತದೆ ಎನ್ನುವ ಬಗ್ಗೆ ಮಾಹಿತಿಯಿಲ್ಲ.

ಆದರೆ ಗಾಯಗಳು, ದೇಹದಿಂದ ಹೊರಬರುವ ದ್ರವಾಂಶ, ಉಸಿರಾಟ ಹಾಗೂ ಕಲುಷಿತ ವಸ್ತುಗಳೊಂದಿಗೆ ನಿಕಟ ಸಂಪರ್ಕದಿಂದ ವೈರಸ್ ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಗೆಳೆಯ ಅಪ್ರಾಪ್ತೆಯ ಮೇಲೆ ರೇಪ್ ಮಾಡುವಾಗ ಕಾವಲು ಕಾಯ್ದ ಬಾಲಕ: ಇಬ್ಬರೂ ಅರೆಸ್ಟ್