Select Your Language

Notifications

webdunia
webdunia
webdunia
webdunia

ಗೋಧಿ ರಫ್ತು ಮಾಡಲಾಗುದಿಲ್ಲ ಭಾರತ

ಗೋಧಿ ರಫ್ತು ಮಾಡಲಾಗುದಿಲ್ಲ ಭಾರತ
ಪ್ಯಾರಿಸ್ , ಶನಿವಾರ, 21 ಮೇ 2022 (07:53 IST)
ಪ್ಯಾರಿಸ್ : ಭಾರತದಲ್ಲಿ ಗೋಧಿ ರಫ್ತು ನಿಷೇಧಿಸಿದ ಬೆನ್ನಲ್ಲೇ ವಿಶ್ವ ಮಾರುಕಟ್ಟೆಯಲ್ಲಿ ಗೋಧಿ ಬೆಲೆಯು ದಾಖಲೆ ಪ್ರಮಾಣದಲ್ಲಿ ಏರಿಕೆ ಆಗಿದೆ.

ಈ ಹಿನ್ನೆಲೆ ಭಾರತ ವಿಶ್ವಸಂಸ್ಥೆ(ಯುಎನ್)ಯಲ್ಲಿ ಮೊದಲ ಬಾರಿಗೆ ಗೋಧಿ ರಫ್ತು ನಿಷೇಧದ ಬಗ್ಗೆ ಮಾತನಾಡಿದೆ. ಮೇ 13ರಂದು ವಿದೇಶಿ ವ್ಯಾಪಾರ ನಿರ್ದೇಶನಾಲಯ(ಡಿಜಿಎಫ್ಟಿ) ಕಳೆದ ವಾರದ ಅಧಿಸೂಚನೆಯಲ್ಲಿ, ಭಾರತವು ಕೇಂದ್ರ ಸರ್ಕಾರ ನೀಡುವ ಅನುಮತಿಯ ಆಧಾರದ ಮೇಲೆ ಗೋಧಿ ರಫ್ತಿಗೆ ಅವಕಾಶ ನೀಡಲಾಗುವುದು ಎಂದು ಹೇಳಿದೆ.

ಈ ಹಿನ್ನೆಲೆ ಮೇ ತಿಂಗಳ ಯುಎನ್ ಸೆಕ್ಯುರಿಟಿ ಕೌನ್ಸಿಲ್ ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್ ಅವರ ಅಧ್ಯಕ್ಷತೆಯಲ್ಲಿ ನಡೆದ ‘ಜಾಗತಿಕ ಆಹಾರ ಭದ್ರತಾ ಕರೆ ಟು ಆಕ್ಷನ್’ ಕುರಿತು ಸಚಿವರ ಸಭೆ ನಡೆಯಿತು. ಈ ವೇಳೆ ವಿದೇಶಾಂಗ ವ್ಯವಹಾರಗಳ ಸಚಿವ ಮುರಳೀಧರನ್ ಮಾತನಾಡಿದರು. 

ಪಾಶ್ಚಿಮಾತ್ಯ ದೇಶಗಳನ್ನು ಕರೆ ನೀಡಿದ ಭಾರತವು, ಕೋವಿಡ್-19 ಲಸಿಕೆಗಳ ವಿಷಯದಲ್ಲಿ ಭಾರತಕ್ಕೆ ದೊಡ್ಡಮಟ್ಟದಲ್ಲಿ ಖರ್ಚು ಆಗಿದೆ. ಇದನ್ನು ನಾವು ನೋಡಿದ್ದೇವೆ. ಗೋಧಿಯು ಕೋವಿಡ್-19 ಲಸಿಕೆಗಳ ದಾರಿಯಲ್ಲಿ ಹೋಗಬಾರದು. ಕೊರೊನಾ ಲಸಿಕೆಯಂತೆ ಗೋಧಿಯನ್ನು ರಫ್ತು ಮಾಡಲಾಗುವುದಿಲ್ಲ. 

ಏಕೆಂದರೆ ಯುಎನ್ನಲ್ಲಿ ಆಹಾರದ ಬೆಲೆಗಳಲ್ಲಿ ನ್ಯಾಯಸಮ್ಮತವಲ್ಲದೆ ಹೆಚ್ಚಳವಾಗುತ್ತಿದೆ. ಇದರಿಂದ ಆಹಾರ ಸಂಗ್ರಹಣೆಯಲ್ಲಿ ತಾರತಮ್ಯ ಉಂಟಾಗಬಹುದು ಎಂಬ ಬಗ್ಗೆ ಕಳವಳ ಉಂಟಾಗುತ್ತಿದೆ. ಆಹಾರ ಧಾನ್ಯಗಳ ವಿಷಯಕ್ಕೆ ಬಂದಾಗ ನಾವೆಲ್ಲರೂ ಪ್ರವೇಶದ ಪ್ರಾಮುಖ್ಯತೆಯನ್ನು ಸಮರ್ಪಕವಾಗಿ ತಿಳಿದುಕೊಳ್ಳುವುದು ಅವಶ್ಯಕ ಎಂದು ಹೇಳಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಹಾರಾಟ ಪ್ರಾರಂಭಿಸಲಿವೆ ಜೆಟ್ ಏರ್‌ವೇಸ್