Select Your Language

Notifications

webdunia
webdunia
webdunia
webdunia

ಮತ್ತೆ ಹಾರಾಟ ಪ್ರಾರಂಭಿಸಲಿವೆ ಜೆಟ್ ಏರ್‌ವೇಸ್

ಮತ್ತೆ ಹಾರಾಟ ಪ್ರಾರಂಭಿಸಲಿವೆ ಜೆಟ್ ಏರ್‌ವೇಸ್
ನವದೆಹಲಿ , ಶನಿವಾರ, 21 ಮೇ 2022 (07:35 IST)
ನವದೆಹಲಿ : ಜೆಟ್ ಏರ್ವೇಸ್ ವಿಮಾನಯಾನ ಸಂಸ್ಥೆ 3 ವರ್ಷಗಳ ಬಳಿಕ ಮತ್ತೆ ಹಾರಾಟಕ್ಕೆ ಸಿದ್ಧತೆ ನಡೆಸುತ್ತಿದೆ.
 
ಜೆಟ್ ಏರ್ವೇಸ್ಗೆ ವಾಯುಯಾನ ನಿಯಂತ್ರಕ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್(ಡಿಜಿಸಿಎ) ವಾಣಿಜ್ಯ ವಿಮಾನಯಾನ ಪುನರಾರಂಭಿಸಲು ಪರವಾನಗಿ ನೀಡಿದೆ.

2019ನೇ ಇಸವಿಯಲ್ಲಿ ಜೆಟ್ ಏರ್ವೇಸ್ ತನ್ನ ಕಾರ್ಯಾಚರಣೆಯನ್ನು ನಿಲ್ಲಿಸಿತ್ತು. ಇದೀಗ ಜೆಟ್ ಆಪರೇಟರ್ ಪ್ರಮಾಣಪತ್ರ ಲಭಿಸಿರುವುದರಿಂದ ಜೆಟ್ ಏರ್ವೇಸ್ ಸಂಸ್ಥೆಗೆ ವಾಣಿಜ್ಯ ವಿಮಾನಯಾನ ಪುನರಾರಂಭಿಸಲು ಅನುಮತಿ ಸಿಕ್ಕಂತಾಗಿದೆ. 

ಜೆಟ್ ಏರ್ವೇಸ್ ಈ ವರ್ಷ ಜುಲೈ ನಿಂದ ಸೆಪ್ಟೆಂಬರ್ ತಿಂಗಳ ಒಳಗಾಗಿ ವಾಣಿಜ್ಯ ಕಾರ್ಯಾಚರಣೆ ಪುನರಾರಂಭಿಸುವುದಾಗಿ ಸಂಸ್ಥೆ ಅಧಿಕೃತ ಮಾಹಿತಿ ನೀಡಿದೆ. 

 

Share this Story:

Follow Webdunia kannada

ಮುಂದಿನ ಸುದ್ದಿ

ಮೈಸೂರಿಗೆ ಬರಲಿದ್ದಾರೆ ಪ್ರಧಾನಿ ?