ಗುರ್ಗಾಂವ್: ಅಪ್ರಾಪ್ತ ಬಾಲಕಿ ಮೇಲೆ 17 ವರ್ಷದ ಯುವಕ ಅತ್ಯಾಚಾರ ನಡೆಸುವಾಗ 15 ವರ್ಷದ ಬಾಲಕ ಹೊರಗಿನಿಂದ ಕಾವಲು ಕಾದಿದ್ದಾನೆ. ಇದೀಗ ಇಬ್ಬರೂ ಆರೋಪಿಗಳೂ ಕಂಬಿ ಎಣಿಸುತ್ತಿದ್ದಾರೆ.
ಕೋಣೆಯಲ್ಲಿ ಬಾಲಕಿ ನಿದ್ರಿಸುತ್ತಿದ್ದಾಗ ನುಗ್ಗಿದ ಯುವಕ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಈ ವೇಳೆ ಕೊಠಡಿಯ ಬಾಗಿಲು ಹಾಕಿ ಆತನ 15 ವರ್ಷದ ಗೆಳೆಯ ಯಾರೂ ಬಾರದಂತೆ ತಡೆದಿದ್ದಾನೆ.
ಈ ಬಗ್ಗೆ ಬಾಲಕಿಯ ಸಹೋದರಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಳು. ಅದರಂತೆ ಪೊಲೀಸರು ಈಗ ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ.