Select Your Language

Notifications

webdunia
webdunia
webdunia
webdunia

ಮನೆಗೆಲಸದಾಕೆಯ ಕೂದಲು ಕತ್ತರಿಸಿ ಚಿತ್ರಹಿಂಸೆ!

ಮನೆಗೆಲಸದಾಕೆಯ ಕೂದಲು ಕತ್ತರಿಸಿ ಚಿತ್ರಹಿಂಸೆ!
ನವದೆಹಲಿ , ಭಾನುವಾರ, 22 ಮೇ 2022 (08:10 IST)
ನವದೆಹಲಿ: ಮನೆಗೆಲಸದಾಕೆಯ ಕೂದಲು ಕತ್ತರಿಸಿ ಮಾಲಿಕರು ಚಿತ್ರಹಿಂಸೆ ಮಾಡಿದ ಪ್ರಕರಣ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

48 ವರ್ಷದ ಮಹಿಳೆ ಈಗ ಮಾಲಿಕರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ಮಾಸಿಕ 7,000 ವೇತನಕ್ಕೆ ದಂಪತಿಯಿದ್ದ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಮಾಲಿಕರು ಹಲ್ಲೆ ನಡೆಸಿದ್ದಲ್ಲದೆ ಕೂದಲು ಕತ್ತರಿಸಿ ಚಿತ್ರಹಿಂಸೆ ನೀಡಿದ್ಧಾರೆ ಎನ್ನಲಾಗಿದೆ.

ಇದೀಗ ಗಾಯಗೊಂಡಿರುವ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ನಡೆಸಿದ ದಂಪತಿ ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಂತರ್ಜಾತಿ ವಿವಾಹ: ಯುವಕನ ಬರ್ಬರ ಹತ್ಯೆ