Select Your Language

Notifications

webdunia
webdunia
webdunia
webdunia

ಐಪಿಎಲ್ 2022: ಅಗ್ರಸ್ಥಾನದ ಮೇಲೆ ಕಣ್ಣಿಟ್ಟಿರುವ ಲಕ್ನೋಗೆ ರಾಜಸ್ಥಾನ್ ಎದುರಾಳಿ

ಐಪಿಎಲ್ 2022: ಅಗ್ರಸ್ಥಾನದ ಮೇಲೆ ಕಣ್ಣಿಟ್ಟಿರುವ ಲಕ್ನೋಗೆ ರಾಜಸ್ಥಾನ್ ಎದುರಾಳಿ
ಮುಂಬೈ , ಭಾನುವಾರ, 15 ಮೇ 2022 (08:40 IST)
ಮುಂಬೈ: ಐಪಿಎಲ್ 2022 ರ ಇಂದಿನ ಎರಡನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಮುಖಾಮುಖಿಯಾಗಲಿದೆ.

ಗುಜರಾತ್ ನಂತೇ ಹೊಸ ತಂಡವಾದರೂ ಈ ಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ಕೆಎಲ್ ರಾಹುಲ್ ನೇತೃತ್ವದ ಲಕ್ನೋ ತಂಡ ಈಗ 12 ಪಂದ್ಯಗಳಿಂದ 8 ಗೆಲುವುಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಇಂದಿನ ಪಂದ್ಯ ಗೆದ್ದರೆ ರಾಹುಲ್ ಪಡೆಗೆ ಅಗ್ರಸ್ಥಾನಕ್ಕೇರುವ ಅವಕಾಶವಿದೆ.

ಅತ್ತ ರಾಜಸ್ಥಾನ್ ಗೂ ಇದು ಪ್ಲೇ ಆಫ್ ಹಂತಕ್ಕೇರುವ ಹಾದಿಯಲ್ಲಿ ಮಹತ್ವದ ಪಂದ್ಯ. ಸದ್ಯಕ್ಕೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದರೂ ರಾಜಸ್ಥಾನ್ ಗೆ ಡೆಲ್ಲಿ, ಆರ್ ಸಿಬಿಯಿಂದ ತೀವ್ರ ಪೈಪೋಟಿಯಿದೆ. ಹೀಗಾಗಿ ಇಂದಿನ ಪಂದ್ಯವನ್ನು ಗೆಲ್ಲುವ ತವಕದಲ್ಲಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜ ಆಂಡ್ರ್ಯೂ ಸೈಮಂಡ್ಸ್ ರಸ್ತೆ ಅಪಘಾತದಲ್ಲಿ ನಿಧನ