Publish Date: Sat, 14 May 2022 (09:40 IST)
Updated Date: Sat, 14 May 2022 (09:54 IST)
ಮುಂಬೈ: ಕಳಪೆ ಫಾರ್ಮ್ ನಿಂದಾಗಿ ಕಂಗೆಟ್ಟಿರುವ ಆರ್ ಸಿಬಿ ಬ್ಯಾಟಿಗ ವಿರಾಟ್ ಕೊಹ್ಲಿ ನಿನ್ನೆ ಔಟಾದ ಬಳಿಕ ತೀವ್ರ ಹತಾಶೆ ಹೊರಹಾಕಿದ್ದಾರೆ.
ಕಿಂಗ್ಸ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ 20 ರನ್ ಗೆ ಔಟಾದ ಕೊಹ್ಲಿ ಬಳಿಕ ಹತಾಶೆಯಲ್ಲಿ ಆಕಾಶದತ್ತ ನೋಡಿ ಇನ್ನೂ ನಾನು ಏನು ಮಾಡಬೇಕು ಎಂಬರ್ಥದಲ್ಲಿ ಹತಾಶೆಯಲ್ಲಿ ಗೊಣಗಿದ್ದಾರೆ.
ಅವರ ಹತಾಶಾ ಮನೋಭಾವ ನೋಡಿ ಅಭಿಮಾನಿಗಳ ಎದೆ ಚೂರಾಗಿದೆ. ಕಳೆದ ಮೂರು ವರ್ಷಗಳಿಂದ ಕೊಹ್ಲಿಯಿಂದ ಒಂದೇ ಒಂದು ಶತಕ ಬಂದಿಲ್ಲ. ಇತ್ತೀಚೆಗಂತೂ ಕೊಹ್ಲಿ ತೀವ್ರ ಹತಾಶೆಯಲ್ಲಿದ್ದಾರೆ.