Select Your Language

Notifications

webdunia
webdunia
webdunia
webdunia

ಐಪಿಎಲ್ 2022: ಕಳೆಗುಂದಿರುವ ಚೆನ್ನೈಗೆ ಗುಜರಾತ್ ಸವಾಲು

ಐಪಿಎಲ್ 2022: ಕಳೆಗುಂದಿರುವ ಚೆನ್ನೈಗೆ ಗುಜರಾತ್ ಸವಾಲು
ಮುಂಬೈ , ಭಾನುವಾರ, 15 ಮೇ 2022 (08:20 IST)
ಮುಂಬೈ: ಐಪಿಎಲ್ 2022 ರಲ್ಲಿ ಇಂದು ಎರಡು ಪಂದ್ಯ ನಡೆಯಲಿದ್ದು ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಅಗ್ರ ಸ್ಥಾನಿ ಗುಜರಾತ್ ಟೈಟನ್ಸ್ ನಡುವೆ ಪಂದ್ಯ ನಡೆಯಲಿದೆ.

ಚೆನ್ನೈ 12 ಪಂದ್ಯಗಳ ಪೈಕಿ ಕೇವಲ 4 ಗೆಲುವು ಸಂಪಾದಿಸಿ ಅಂಕಪಟ್ಟಿಯಲ್ಲಿ 9 ನೇ ಸ್ಥಾನದಲ್ಲಿದೆ. ಧೋನಿ ಪಡೆ ಪ್ಲೇ ಆಫ್ ಹಂತಕ್ಕೇರುವುದು ಕನಸಿನ ಮಾತೇ ಸರಿ.

ಅತ್ತ ಗುಜರಾತ್ ಇದುವರೆಗೆ ಆಡಿದ 12 ಪಂದ್ಯಗಳ ಪೈಕಿ ಕೇವಲ 3 ಸೋಲು ಕಂಡಿದ್ದು, ಅಗ್ರ ಸ್ಥಾನಿಯಾಗಿ ಮೆರೆಯುತ್ತಿದೆ. ಈಗಾಗಲೇ ಹೆಚ್ಚು ಕಡಿಮೆ ಪ್ಲೇ ಆಫ್ ಹಂತಕ್ಕೇರಿರುವ ಗುಜರಾತ್ ಗೆ ಈ ಪಂದ್ಯ ಕೇವಲ ಔಪಚಾರಿಕವಷ್ಟೇ. ಈ ಪಂದ್ಯ ಅಪರಾಹ್ನ 3.30 ಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2022: ಕೆಕೆಆರ್ ಗೆ ಹೈದರಾಬಾದ್ ವಿರುದ್ಧ ಭರ್ಜರಿ ಗೆಲುವು