Publish Date: Sat, 14 May 2022 (18:20 IST)
Updated Date: Sat, 14 May 2022 (18:22 IST)
ಮುಂಬೈ: ಐಪಿಎಲ್ ನಲ್ಲಿ ಮ್ಯಾಚ್ ಫಿಕ್ಸಿಂಗ್ ಹೊಸದೇನಲ್ಲ. 2013 ರಲ್ಲಿ ಮ್ಯಾಚ್ ಫಿಕ್ಸಿಂಗ್ ನಿಂದಾಗಿ ಎಸ್. ಶ್ರೀಶಾಂತ್ ರಂತಹ ಕ್ರಿಕೆಟಿಗರು ನಿಷೇಧಕ್ಕೊಳಗಾಗಿದ್ದರು.
ಇದೀಗ 2019 ರಲ್ಲಿ ನಡೆದ ಕಳ್ಳಾಟ ಪ್ರಕರಣವನ್ನು ಸಿಬಿಐ ಬಯಲಿಗೆಳೆದಿದೆ. ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಗೆ ಸಂಬಂಧಿಸಿದಂತೆ ಪಾಕಿಸ್ತಾನದಿಂದ ಬಂದಿರುವ ವರದಿ ಪ್ರಕಾರ ಸಿಬಿಐ ಮೂವರನ್ನು ಈಗಾಗಲೇ ಬಂಧಿಸಿದೆ.
2019 ರಲ್ಲಿ ಭಾರತದಲ್ಲಿ ನಡೆದಿದ್ದ ಐಪಿಎಲ್ ನಲ್ಲಿ ಭಾರೀ ಪ್ರಮಾಣದಲ್ಲಿ ಕಳ್ಳಾಟ ನಡೆದಿತ್ತು ಎಂದು ಆರೋಪ ಕೇಳಿಬಂದಿದೆ. ಇದರ ವ್ಯಾಪ್ತಿ ಬಗ್ಗೆ ಇದೀಗ ಸಿಬಿಐ ತನಿಖೆ ನಡೆಸುತ್ತಿದೆ.