Select Your Language

Notifications

webdunia
webdunia
webdunia
Sunday, 6 April 2025
webdunia

ಅಗ್ರೆಷನ್ ನಲ್ಲಿ ಕೊಹ್ಲಿಯನ್ನೂ ಮೀರಿಸಿದ್ರು ಗೌತಮ್ ಗಂಭೀರ್!

ಗೌತಮ್ ಗಂಭೀರ್
ಮುಂಬೈ , ಗುರುವಾರ, 19 ಮೇ 2022 (09:40 IST)
ಮುಂಬೈ: ಐಪಿಎಲ್ 2022 ರ ನಿನ್ನೆಯ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 2 ರನ್ ಗಳಿಂದ ರೋಚಕವಾಗಿ ಗೆದ್ದ ಬಳಿಕ ಲಕ್ನೋ ಕೋಚ್ ಗೌತಮ್ ಗಂಭೀರ್ ಸೆಲೆಬ್ರೇಷನ್ ಮಾಡಿದ್ದು ನೋಡಿ ನೆಟ್ಟಿಗರು ಭಾರೀ ಇಷ್ಟಪಟ್ಟಿದ್ದಾರೆ.

ಕೊಹ್ಲಿಯಂತೇ ಗಂಭೀರ್ ಕೂಡಾ ಮೈದಾನದಲ್ಲಿ ಆಕ್ರಮಣಕಾರಿ ವರ್ತನೆಯಿಂದ ಸುದ್ದಿಯಾಗುತ್ತಿದ್ದರು. ಈ ಹಿಂದೆ ಇದೇ ಕೆಕೆಆರ್ ನಾಯಕತ್ವ ವಹಿಸಿ ಚಾಂಪಿಯನ್ ನಾಯಕರಾಗಿದ್ದರು. ಇದೀಗ ಅದೇ ಕೆಕೆಆರ್ ವಿರುದ್ಧ ಲಕ್ನೋ ಕೋಚ್ ಆಗಿ ಗೆದ್ದ ಸಂಭ್ರಮವನ್ನು ಗೌತಮ್ ಗಂಭೀರ್ ಆಚರಿಸಿದ ಪರಿ ನೋಡಿ ನೆಟ್ಟಿಗರು ಖುಷಿಪಟ್ಟಿದ್ದಾರೆ.

ಗೆಲ್ಲುತ್ತಿದ್ದಂತೇ ಜೋರಾಗಿ ಕಿರುಚಿ ಮೈದಾನದತ್ತ ಓಡಿ ಬಂದ ಗಂಭೀರ್ ರನ್ನು ನೋಡಿ ಕೋಚ್ ಎಂದರೆ ಹೀಗಿರಬೇಕು ನೋಡಿ ಎಂದು ನೆಟ್ಟಿಗರು ತಮಾಷೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2022: ಆರ್ ಸಿಬಿಗೆ ಇಂದು ಅಗ್ರಸ್ಥಾನಿ ಗುಜರಾತ್ ಎದುರಾಳಿ