Publish Date: Wed, 18 May 2022 (17:55 IST)
Updated Date: Wed, 18 May 2022 (17:56 IST)
ಮುಂಬೈ: ಐಪಿಎಲ್ 2022 ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪ್ಲೇ ಆಫ್ ಹಂತಕ್ಕೇರಲು ಹೆಣಗಾಡುತ್ತಿರುವ ಬೆನ್ನಲ್ಲೇ ನಾಯಕ ಕೇನ್ ವಿಲಿಯಮ್ಸನ್ ತಂಡದಿಂದ ಹೊರನಡೆದಿದ್ದಾರೆ.
ನ್ಯೂಜಿಲೆಂಡ್ ಮೂಲದ ಕೇನ್ ವಿಲಿಯಮ್ಸನ್ ಐಪಿಎಲ್ ಕೂಟದ ಮುಂದಿನ ಪಂದ್ಯಗಳಿಗೆ ಲಭ್ಯರಿರುವುದಿಲ್ಲ. ವೈಯಕ್ತಿಕ ಕಾರಣಗಳಿಂದ ತವರಿಗೆ ವಾಪಸ್ ಆಗಿದ್ದಾರೆ.
ಕೇನ್ ಪತ್ನಿ ಎರಡನೇ ಬಾರಿಗೆ ಗರ್ಭಿಣಿಯಾಗಿದ್ದು, ಸದ್ಯದಲ್ಲೇ ಹೆರಿಗೆಯಾಗಲಿದೆ. ಹೀಗಾಗಿ ತಾಯಿ, ಮಗುವಿನ ಜೊತೆಗಿರಲು ಕೇನ್ ತವರಿಗೆ ವಾಪಸಾಗುತ್ತಿದ್ದಾರೆ.