ಮುಂಬೈ: ಟೀಂ ಇಂಡಿಯಾ ಜೊತೆ ಕ್ರಿಕೆಟ್ ಸರಣಿ ಆಯೋಜಿಸಿದರೆ ಇತರ ರಾಷ್ಟ್ರಗಳಿಗೆ ಉತ್ತಮ ಆದಾಯ ಸಿಗುತ್ತದೆ ಎನ್ನುವುದರಲ್ಲಿ ಡೌಟೇ ಇಲ್ಲ. ಅದಕ್ಕೆ ಭಾರತೀಯ ಕ್ರಿಕೆಟಿಗರ ಜನಪ್ರಿಯತೆ ಜೊತೆಗೆ ಇಲ್ಲಿನ ಜನಕ್ಕೆ ಕ್ರಿಕೆಟ್ ಮೇಲಿರುವ ಪ್ರೀತಿ ಕಾರಣ.
ಇದೀಗ ಜಮೈಕಾ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ವಿಲ್ಫ್ರೆಡ್ ಬಿಲ್ಲಿ ಹೆವೆನ್ ಕೂಡಾ ಇದೇ ಮಾತು ಹೇಳಿದ್ದಾರೆ. ಭಾರತ ಕೆರೆಬಿಯನ್ ನಗರಕ್ಕೆ ಕ್ರಿಕೆಟ್ ಆಡಲು ಬಂದರೆ ನಾವು ಅತೀ ಹೆಚ್ಚು ದುಡ್ಡು ಮಾಡಿಕೊಳ್ಳುತ್ತೇವೆ ಎಂದಿದ್ದಾರೆ ವಿಲ್ಫ್ರೆಡ್.
ವೆಸ್ಟ್ ಇಂಡೀಸ್ ಕ್ರಿಕೆಟ್ ಗೆ ಟೀಂ ಇಂಡಿಯಾ ಜೊತೆ ಕ್ರಿಕೆಟ್ ಸರಣಿ ಆಯೋಜಿಸುವುದರಿಂದ ಆದಾಯ ಹೆಚ್ಚಾಗುತ್ತದೆ. ನಮಗೆ ಲಾಭ ಮಾಡಿಕೊಳ್ಳಲು ಅವಕಾಶ ಸಿಗುವುದೇ ಆಗ ಎಂದು ವಿಲ್ಫ್ರೆಡ್ ಹೇಳಿಕೊಂಡಿದ್ದಾರೆ.