Select Your Language

Notifications

webdunia
webdunia
webdunia
webdunia

ಐಪಿಎಲ್ 2022: ಆರ್ ಸಿಬಿಗೆ ಇಂದು ಅಗ್ರಸ್ಥಾನಿ ಗುಜರಾತ್ ಎದುರಾಳಿ

ಐಪಿಎಲ್ 2022: ಆರ್ ಸಿಬಿಗೆ ಇಂದು ಅಗ್ರಸ್ಥಾನಿ ಗುಜರಾತ್ ಎದುರಾಳಿ
ಮುಂಬೈ , ಗುರುವಾರ, 19 ಮೇ 2022 (09:20 IST)
ಮುಂಬೈ: ಐಪಿಎಲ್ 2022 ರಲ್ಲಿ ಇಂದಿನ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪರಸ್ಪರ ಸೆಣಸಾಡಲಿವೆ.

ಸದ್ಯಕ್ಕೆ ಐದನೇ ಸ್ಥಾನದಲ್ಲಿರುವ ರಾಯ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕಳೆದ ಪಂದ್ಯದಲ್ಲಿ ಸೋಲಾಗಿತ್ತು. ಈಗಾಗಲೇ ಪ್ಲೇ ಆಫ್ ಕನಸು ಕ್ಷೀಣವಾಗಿದೆ. ಇದೀಗ ಗ್ರೂಪ್ ಹಂತದ ಕೊನೆಯ ಪಂದ್ಯ ಆಡಲು ತಂಡ ಸಿದ್ಧವಾಗಿದೆ.

ಇನ್ನೊಂದೆಡೆ ಗುಜರಾತ್ ಗೆ ಈಗಾಗಲೇ ಪ್ಲೇ ಆಫ್ ಸ್ಥಾನ ಭದ್ರವಾಗಿದೆ. ಹೀಗಾಗಿ ಈ ಪಂದ್ಯಕ್ಕೆ ಅಷ್ಟೊಂದು ಮಹತ್ವವಿಲ್ಲ. ಹಾಗಿದ್ದರೂ ತನ್ನ ಅಗ್ರಸ್ಥಾನ ಉಳಿಸಿಕೊಳ್ಳಲು ಈ ಪಂದ್ಯವನ್ನು ಗೆಲ್ಲುವ ಗುರಿ ಹಾಕಿಕೊಂಡಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ರಿಕೆಟ್ ಮಂಡಳಿ ಅಧಿಕಾರಿ ಮೇಲೆ ಮುನಿಸು: ರಣಜಿ ಟ್ರೋಫಿ ಆಡದೇ ಇರಲು ನಿರ್ಧರಿಸಿದ ವೃದ್ಧಿಮಾನ್ ಸಹಾ