Select Your Language

Notifications

webdunia
webdunia
webdunia
webdunia

ಐಪಿಎಲ್ 2022: ಲಕ್ನೋ ಅಗ್ರ ಸ್ಥಾನದ ಕನಸಿಗೆ ತಣ್ಣೀರೆರಚಿದ ರಾಜಸ್ಥಾನ್

ಐಪಿಎಲ್ 2022: ಲಕ್ನೋ ಅಗ್ರ ಸ್ಥಾನದ ಕನಸಿಗೆ ತಣ್ಣೀರೆರಚಿದ ರಾಜಸ್ಥಾನ್
ಮುಂಬೈ , ಸೋಮವಾರ, 16 ಮೇ 2022 (08:00 IST)
ಮುಂಬೈ: ಐಪಿಎಲ್ 2022 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧ ನಡೆದ ಪಂದ್ಯವನ್ನು ರಾಜಸ್ಥಾನ್ ರಾಯಲ್ಸ್ 24 ರನ್ ಗಳಿಂದ ಗೆದ್ದುಕೊಂಡಿದೆ. ಇದರೊಂದಿಗೆ ಲಕ್ನೋ ಅಗ್ರ ಸ್ಥಾನಕ್ಕೇರುವ ಕನಸು ಭಗ್ನವಾಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿತು. ಯಶಸ್ವಿ ಜೈಸ್ವಾಲ್ 41, ಸಂಜು ಸ್ಯಾಮ್ಸನ್ 32, ದೇವದತ್ತ್ ಪಡಿಕ್ಕಲ್ 39 ರನ್ ಗಳಿಸಿದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಲಕ್ನೋ  20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಲಷ್ಟೇ ಶಕ್ತವಾಯಿತು. ದೀಪಕ್ ಹೂಡಾ 59 ರನ್ ಸಿಡಿಸಿದರೆ ಕೃನಾಲ್ ಪಾಂಡ್ಯ 25, ಮಾರ್ಕಸ್ ಸ್ಟಾಯ್ನಿಸ್ 27 ರನ್ ಗಳಿಸಿದರು. ಆದರೆ ಲಕ್ನೋಗೆ ಗೆಲುವು ಸಿಗಲಿಲ್ಲ. ಬ್ಯಾಟಿಂಗ್ ನಲ್ಲಿ 19 ರನ್ ಗಳಿಸಿ ಬೌಲಿಂಗ್ ನಲ್ಲಿ 2 ವಿಕೆಟ್ ಕಬಳಿಸಿದ ಟ್ರೆಂಟ್ ಬೌಲ್ಟ್ ಪಂದ್ಯ ಶ್ರೇಷ್ಠರಾದರು.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2022: ಕಪ್ಪು ಪಟ್ಟಿ ಧರಿಸಿ ಆಡಿದ ಗುಜರಾತ್-ಚೆನ್ನೈ ಕ್ರಿಕೆಟಿಗರು