Publish Date: Sun, 15 May 2022 (11:11 IST)
Updated Date: Sun, 15 May 2022 (09:12 IST)
ಮುಂಬೈ: ದಕ್ಷಿಣಾ ಆಫ್ರಿಕಾ ವಿರುದ್ಧ ತವರಿನಲ್ಲಿ ನಡೆಯಲಿರುವ ಟಿ20 ಸರಣಿಗೆ ಟೀಂ ಇಂಡಿಯಾ ಆಯ್ಕೆ ಸದ್ಯದಲ್ಲೇ ನಡೆಯಲಿದೆ.
ಈ ಸರಣಿಗೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಸೇರಿದಂತೆ ಪ್ರಮುಖರಿಗೆ ವಿಶ್ರಾಂತಿ ನೀಡಲು ಬಿಸಿಸಿಐ ಆಯ್ಕೆ ಸಮಿತಿ ಚಿಂತನೆ ನಡೆಸಿದೆ. ಅವರ ಬದಲು ಶಿಖರ್ ಧವನ್, ಹಾರ್ದಿಕ್ ಪಾಂಡ್ಯ ತಂಡಕ್ಕೆ ಕಮ್ ಬ್ಯಾಕ್ ಮಾಡಲಿದ್ದಾರೆ.
ಐಪಿಎಲ್ ನಲ್ಲಿ ಗುಜರಾತ್ ತಂಡದ ನಾಯಕತ್ವ ಮತ್ತು ಆಟಗಾರನಾಗಿ ಯಶಸ್ಸು ಕಂಡಿರುವ ಹಾರ್ದಿಕ್ ಪಾಂಡ್ಯಗೆ ಈಗ ಅದೃಷ್ಟ ಖುಲಾಯಿಸಲಿದೆ. ಪ್ರಮುಖರ ಅನುಪಸ್ಥಿತಿಯಲ್ಲಿ ಹಾರ್ದಿಕ್ ಅಥವಾ ಶಿಖರ್ ಧವನ್ ಗೆ ಟೀಂ ಇಂಡಿಯಾ ನಾಯಕತ್ವ ಸಿಗುವ ಸಾಧ‍್ಯತೆಯಿದೆ. ಕಳೆದ ಕೆಲವು ಸಮಯದಿಂದ ಫಾರ್ಮ್ ಕೊರತೆಯಿಂದ ತಂಡಕ್ಕೆ ಆಯ್ಕೆಯಾಗದೇ ಇದ್ದಿದ್ದ ಹಾರ್ದಿಕ್ ಗೆ ಈಗ ದಿಡೀರ್ ನಾಯಕರಾಗುವ ಅವಕಾಶ ಸಿಕ್ಕಿದೆ.