Select Your Language

Notifications

webdunia
webdunia
webdunia
webdunia

18 ವರ್ಷಗಳ ಕಾಲ ಹುಡುಗಿಯನ್ನು ಬಂಧಿಸಿಟ್ಟುಕೊಂಡ ನಿರಂತರವಾಗಿ ಅತ್ಯಾಚಾರ ಎಸಗಿದ ಈ ವೈದ್ಯ

18 ವರ್ಷಗಳ ಕಾಲ ಹುಡುಗಿಯನ್ನು ಬಂಧಿಸಿಟ್ಟುಕೊಂಡ  ನಿರಂತರವಾಗಿ ಅತ್ಯಾಚಾರ ಎಸಗಿದ ಈ ವೈದ್ಯ
ಇಂಡೋನೆಷಿಯಾ , ಶನಿವಾರ, 11 ಆಗಸ್ಟ್ 2018 (10:56 IST)
ಇಂಡೋನೇಷ್ಯಾ : ಜೀವ ಉಳಿಸುವ ವೈದ್ಯ ದೇವರ ಸ್ವರೂಪವೆಂದು ಹೇಳುತ್ತಾರೆ. ಆದರೆ ಈ ದೇವರ ರೂಪದ ವೈದ್ಯನೇ ರಾಕ್ಷಸನಾಗಿ ಚಿಕಿತ್ಸೆಯ ನೆಪದಲ್ಲಿ ಯುವತಿಯೊಬ್ಬಳ ಮೇಲೆ ನಿರಂತರ ಅತ್ಯಾಚಾರ ಎಸಗುತ್ತಿದ್ದ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.


ಹೌದು. ಬಡ ಕುಟುಂಬವೊಂದು ಚಿಕಿತ್ಸೆಗಾಗಿ ತಮ್ಮ‌ 13 ವರ್ಷದ ಮಗಳನ್ನು ವೈದ್ಯರ ಬಳಿ ಕರೆ ತಂದಿದ್ದರು. ಆದರೆ ಆ ವೈದ್ಯನು ಚಿಕಿತ್ಸೆಗಾಗಿ ಆಕೆಯನ್ನು ಉಳಿಸಿಕೊಂಡು ಪೋಷಕರನ್ನು ಮನೆಗೆ ಕಳುಹಿಸಿದ್ದಾನೆ. ಬಳಿಕ ಆಕೆಯನ್ನು ತನ್ನ‌ ಮನೆ ಸಮೀಪದ ಗುಹೆಯಲ್ಲಿ ಬಂಧಿಸಿಟ್ಟು ಕಳೆದ 18 ವರ್ಷಗಳಿಂದ ನಿರಂತರ ಅತ್ಯಾಚಾರ ನಡೆಸಿದ್ದಾನೆ. ಪೋಷಕರು ಮಗಳನ್ನು  ವಿಚಾರಿಸಲು ಬಂದಾಗ, ಆಕೆ ಜಕಾರ್ತಾಗೆ ಹೋಗಿದ್ದಾಳೆ ಎಂದು ಸುಳ್ಳು ಹೇಳಿ ಕಳಿಸಿದ್ದನಂತೆ.


ಆದರೆ ಪೊಲೀಸರು ಈ ಪ್ರಕರಣದ ತನಿಖೆ ನಡೆಸಿದಾಗ ಆತನ ಬಣ್ಣ  ಬಯಲಾಗಿದ್ದು, ಇದೀಗ ಆತ  ಪೊಲೀಸರ ಅತಿಥಿಯಾಗಿದ್ದಾನೆ. ಆತನು ಗೆಳೆಯನ ಆತ್ಮದ ಕತೆಯೊಂದನ್ನು ಕಟ್ಟಿ ಯುವತಿಯನ್ನು ನಂಬಿಸಿ ತನ್ನ ಕಾಮತೃಷೆ ತೀರಿಸಿಕೊಳ್ಳುತ್ತಿದ್ದ ಎಂದು ತನಿಖಾಧಿಕಾರಿಗಳು ಅಲ್ಲಿನ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಥಮ ಪ್ರಧಾನಿ ನೆಹರೂ ಬಗ್ಗೆ ಬಿಜೆಪಿ ಶಾಸಕನ ವಿವಾದಾತ್ಮಕ ಹೇಳಿಕೆ