Publish Date: Sat, 11 Aug 2018 (10:06 IST)
Updated Date: Sat, 11 Aug 2018 (10:09 IST)
ನವದೆಹಲಿ: ಭಾರತದ ಪ್ರಥಮ ಪ್ರಧಾನಿ ಜವಹರ ಲಾಲ್ ನೆಹರೂ ಬಗ್ಗೆ ರಾಜಸ್ಥಾನದ ಬಿಜೆಪಿ ಶಾಸಕ ಗ್ಯಾನ್ ದೇವ್ ಅಹುಜಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನೆಹರೂ ಬೀಫ್, ಪೋರ್ಕ್ ಸೇವಿಸುತ್ತಿದ್ದರು. ಹೀಗಾಗಿ ಅವರು ‘ಪಂಡಿತ್’ ಅಲ್ಲ ಎಂದು ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿ ಮಾಡುವ ಗ್ಯಾನ್ ದೇವ್ ಹೇಳಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ, ಈಗಿನ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಯಾವತ್ತೂ ತಮ್ಮ ಅಜ್ಜಿ ಇಂದಿರಾ ಗಾಂಧಿ ಜತೆಗೆ ದೇವಾಲಯಗಳಿಗೆ ಭೇಟಿ ಕೊಟ್ಟವರಲ್ಲ. ನನ್ನ ಮಾತು ಸುಳ್ಳಾದರೆ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುವೆ, ಇಲ್ಲಾ ಸಚಿನ್ ಪೈಲಟ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಗ್ಯಾನ್ ದೇವ್ ಸವಾಲು ಹಾಕಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.