ನವದೆಹಲಿ: ಪ್ರಧಾನಿ ಮೋದಿಯದ್ದು ದಲಿತ ವಿರೋಧಿ ಮನಸ್ಥಿತಿ. ಆದರೆ ನಮ್ಮ ಪಕ್ಷ ದೇಶದ ಎಲ್ಲಾ ವರ್ಗದ ಜನರಿಗೆ ಅವಕಾಶ ಕಲ್ಪಿಸಲು ಹೋರಾಟ ನಡೆಸುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
									
			
			 
 			
 
 			
					
			        							
								
																	ದೆಹಲಿಯ ಜಂಥರ್ ಮಂಥರ್ ನಲ್ಲಿ ನಡೆದ ಎಸ್ ಎಸ್ಟಿ ಖಾಯಿದೆ 1989 ರನ್ನು ಬದಲಾಯಿಸಲು ಹೊರಟಿರುವ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಯಲ್ಲಿ ಪಾಲ್ಗೊಂಡ ರಾಹುಲ್ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.
									
										
								
																	‘ನಮ್ಮ ಕನಸಿನ ಭಾರತದಲ್ಲಿ ಜಾತಿ, ಧರ್ಮ, ವರ್ಗದ ಬೇಧವಿಲ್ಲದೇ ಎಲ್ಲಾ ಪಂಗಡದವರಿಗೂ ಸಮಾನ ಅವಕಾಶವಿರಬೇಕು. ಎಲ್ಲರೂ ಅಭಿವೃದ್ಧಿಯಾಗಬೇಕು. ಅಂತಹ ಭಾರತವನ್ನು ನಾವು ನೋಡಲು ಬಯಸುತ್ತೇವೆ. ಆದರೆ ಕೇಂದ್ರದ ಮೋದಿ ಸರ್ಕಾರಕ್ಕೆ ದಲಿತರನ್ನು ದಮನಿಸುವುದೇ ಕೆಲಸ’ ಎಂದು ರಾಹುಲ್ ಟೀಕಿಸಿದ್ದಾರೆ.
									
											
							                     
							
							
			        							
								
																	ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.