Publish Date: Thu, 09 Aug 2018 (10:36 IST)
Updated Date: Thu, 09 Aug 2018 (10:38 IST)
ಬೆಂಗಳೂರು: ರಾಜ್ಯ ಪ್ರವಾಸ ಮಾಡಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ರಾಜ್ಯಾದ್ಯಕ್ಷ ಬಿಎಸ್ ಯಡಿಯೂರಪ್ಪ ಕಿಡಿ ಕಾರಿದ್ದಾರೆ.
ರಾಹುಲ್ ಗಾಂಧಿಗೂ ನಮ್ಮ ರಾಜ್ಯ ಪ್ರವಾಸಕ್ಕೂ ನಮಗೂ ಸಂಬಂಧವಿಲ್ಲ. ಅಷ್ಟಕ್ಕೂ ರಾಹುಲ್ ಗಾಂಧಿ ಮೊದಲು ಕರ್ನಾಟಕದಲ್ಲಿ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳಲಿ. ಕರ್ನಾಟಕ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ತಿಳಿದುಕೊಳ್ಳಲಿ ಎಂದು ಬಿಎಸ್ ವೈ ಕಿಡಿ ಕಾರಿದ್ದಾರೆ.
ಸಾಲಮನ್ನಾ ಮಾಡ್ತೀವಿ ಎಂದು ಈ ಮೈತ್ರಿ ಸರ್ಕಾರದವರು ಬಂದ ದಿನದಿಂದಲೂ ಹೇಳುತ್ತಲೇ ಬಂದಿದ್ದಾರೆ. ಸಾಲಮನ್ನಾ ಎಲ್ಲಿ ಆಗಿದೆ ರೀ? ಎಂದು ಬಿಎಸ್ ವೈ ರಾಜ್ಯ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.