Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ನಾಯಕರನ್ನು ದುರ್ಬಲರು ಎಂದ ಕೆಎಸ್ಈ

ಕಾಂಗ್ರೆಸ್ ನಾಯಕರನ್ನು ದುರ್ಬಲರು ಎಂದ ಕೆಎಸ್ಈ
ಮೈಸೂರು , ಗುರುವಾರ, 9 ಆಗಸ್ಟ್ 2018 (19:27 IST)
ರಾಜ್ಯ ಸರಕಾರ ಇನ್ನೂ ಟೇಕಾಫ್ ಆಗಿಲ್ಲ. ಕಾಂಗ್ರೆಸ್ ಶಾಸಕರು ದುರ್ಬಲರಾಗಿದ್ದಾರೆ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಆರೋಪಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷರಿಗೆ ಅವರದೇ ಪಕ್ಷದ ನಾಯಕರ ಮೇಲೆ ನಂಬಿಕೆಯಿಲ್ಲ. ಹೀಗಾಗಿ ಬಿಜೆಪಿ ಮೇಲೆ ಗೂಬೆ ಕೂಡಿಸುವ ಕೆಲಸ ಮಾಡುತ್ತಿದ್ದಾರೆ. ಹುಲಿಯಂತೆ ಭಾರತೀಯ ಜನತಾ ಪಕ್ಷದ ಶಾಸಕರು ಇದ್ದಾರೆ ಎಂದು ಬಣ್ಣಿಸಿದರು.

ಸಮ್ಮಿಶ್ರ ಸರಕಾರದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ನಾಯಕರಿಗೆ ಅವರದೇ ಪಕ್ಷದ ಶಾಸಕರ ಮೇಲೆ ನಂಬಿಕೆ ಇಲ್ಲ. ನಾವು ಯಾವುದೇ ಶಾಸಕರನ್ನು ಕರೆಯುತ್ತಿಲ್ಲ. ಆಪರೇಷನ್ ನಡೆಯುತ್ತಿಲ್ಲ ಎಂದರು. ಪ್ರಸ್ತುತ ಸರಕಾರದಿಂದ ಅಭಿವೃದ್ಧಿ ಕುಂಠಿತವಾಗಿದೆ. ವರ್ಗಾವಣೆಗಳಲ್ಲಿ ಬ್ಯುಸಿಯಾಗಿರುವ ಸಚಿವರು, ಕ್ಷೇತ್ರದ ಹಿತ ಮರೆತಿದ್ದಾರೆ ಎಂದು ದೂರಿದರು.




Share this Story:

Follow Webdunia kannada

ಮುಂದಿನ ಸುದ್ದಿ

ಕಂದಮ್ಮಗಳ ಎದುರಲ್ಲೇ ಪತ್ನಿಯನ್ನು ಕೊಲೆ ಮಾಡಿದ ಭೂಪ