Select Your Language

Notifications

webdunia
webdunia
webdunia
webdunia

ಒಣಕೆಮ್ಮಿನ ನಿವಾರಣೆಗೆ ಬಳಸಿ ಈ ಸರಳ ಮನೆಮದ್ದು

ಒಣಕೆಮ್ಮಿನ ನಿವಾರಣೆಗೆ ಬಳಸಿ ಈ ಸರಳ ಮನೆಮದ್ದು
ಬೆಂಗಳೂರು , ಗುರುವಾರ, 9 ಆಗಸ್ಟ್ 2018 (18:08 IST)
ವಾತಾವರಣದಲ್ಲಿ ಉಂಟಾಗುವ ಬದಲಾವಣೆಗಳು, ಅಲರ್ಜಿ, ಮಾಲಿನ್ಯದಿಂದ ನಮ್ಮಲ್ಲಿ ಕೆಮ್ಮು, ಜ್ವರ, ಒಣಕೆಮ್ಮು, ನೆಗಡಿ ಕಾಣಿಸಿಕೊಳ್ಳುತ್ತದೆ. ಒಣಕೆಮ್ಮು ಅಂತಹ ದೊಡ್ಡ ರೋಗವಲ್ಲದಿದ್ದರೂ ಅದನ್ನು ಕಡಿಮೆ ಮಾಡುವುದು ಅಷ್ಟು ಸುಲಭದ ವಿಷಯವಲ್ಲ.

ಒಣಕೆಮ್ಮು ಒಮ್ಮೆ ಅಂಟಿಕೊಂಡರೆ ಅದರ ಜೊತೆಗೆ ಎದೆ ನೋವು, ಹೊಟ್ಟು ನೋವು, ತಲೆ ನೋವು, ಗಂಟಲ ಕಿರಿಕಿರಿ ಹೀಗೆ ಒಂದರಮೇಲೊಂದು ಶುರುವಾಗುತ್ತದೆ. ಇದಕ್ಕೆ ಸುಲಭವಾದ ಮನೆಮದ್ದುಗಳನ್ನು ಬಳಸಿಕೊಂಡು ಒಣಕೆಮ್ಮನ್ನು ನಿವಾರಣೆ ಮಾಡುವುದು ಹೇಗೆ ಎಂದು ತಿಳಿಯೋಣ -
 
* ದಾಳಿಂಬೆ ಹೂವುಗಳನ್ನು ಒಣಗಿಸಿ ಪುಡಿ ಮಾಡಿ ಜೇನುತುಪ್ಪದೊಂದಿಗೆ ದಿನಕ್ಕೆ 4 ಬಾರಿ ಸೇವಿಸಿ.
 
* 1/4 ಚಮಚ ಕಾಳು ಮೆಣಸಿನ ಪುಡಿಯನ್ನು 1 ಚಮಚ ಜೇನುತುಪ್ಪದೊಂದಿಗೆ ಸೇರಿಸಿಕೊಂಡು ತಿಂದರೆ ಕಫ ಮತ್ತು ಗಂಟಲ ಕಿರಿಕಿರಿ ಕಡಿಮೆಯಾಗುತ್ತದೆ.
 
* 1 ಚಮಚ ನಿಂಬೆಹಣ್ಣಿನ ರಸಕ್ಕೆ 1/4 ಚಮಚ ಜೇನುತುಪ್ಪವನ್ನು ಸೇರಿಸಿಕೊಂಡು ದಿನಕ್ಕೆ 2 ಬಾರಿ ಸೇವಿಸಬೇಕು.
 
* ರಾತ್ರೆ ಮಲಗುವ ಮುಂಚೆ 1 ಲೋಟ ಬಿಸಿ ಹಾಲಿಗೆ 1/2 ಚಮಚ ಅರಿಶಿಣವನ್ನು ಸೇರಿಸಿಕೊಂಡು ಕುಡಿಯಬೇಕು.
 
* 1 ಚಮಚ ನಿಂಬೆಹಣ್ಣಿನ ರಸಕ್ಕೆ 1/4 ಚಮಚ ಕಲ್ಲುಸಕ್ಕರೆಯ ಪುಡಿಯನ್ನು ಸೇರಿಸಿ, ಅಂಟಿನಂತಾಗುವವರೆಗೆ ಸ್ವಲ್ಪ ಬಿಸಿ ಮಾಡಿಕೊಳ್ಳಿ. ನಂತರ ಇಡಿ ದಿನ ಅದನ್ನು ತಿನ್ನುತ್ತಾ ಇರಿ.
 
* 2-3 ಇಡಿ ಕಾಳುಮೆಣಸನ್ನು ನಾಲಿಗೆಯ ಮೇಲಿಟ್ಟು ಚೀಪುತ್ತಿರಿ.
 
* 1 ಚಮಚ ದೇಸಿ ತುಪ್ಪದಲ್ಲಿ 1/2 ಚಮಚ ಕರಿಮೆಣಸಿನ ಪುಡಿಯನ್ನು ಸೇರಿಸಿ ತುಂಬಿದ ಹೊಟ್ಟೆಯಲ್ಲಿ ಸೇವಿಸಬೇಕು.
 
* 1 ಕಪ್ ನೀರಿಗೆ 10 ತುಳಸಿ ಎಲೆಗಳನ್ನು ಹಾಕಿ ಸಣ್ಣ ಉರಿಯಲ್ಲಿ ಕುದಿಸಿ, ಇದು ಬಿಸಿಯಾಗಿರುವಾಗಲೇ ಕುಡಿಯಬೇಕು.
 
* ಒಣಕೆಮ್ಮಿನಿಂದಾಗುವ ಗಂಟಲ ಕಿರಿಕಿರಿಗೆ 1 ಲೋಟ ಬಿಸಿ ನೀರಿಗೆ 1/2 ಚಮಚ ಉಪ್ಪನ್ನು ಸೇರಿಸಿ ಮುಕ್ಕಳಿಸಬೇಕು.
 
* ಶುಂಠಿ ಚಹಾವನ್ನು ಕುಡಿಯಿರಿ.
 
* ನೀಲಗಿರಿ ಎಣ್ಣೆಯನ್ನು ಬಿಸಿ ನೀರಿಗೆ ಹಾಕಿ, ಆ ಹಬೆಯನ್ನು ಮೂಗಿನಲ್ಲಿ ತೆಗೆದುಕೊಂಡು ಬಾಯಿಯಲ್ಲಿ ಬಿಡುವುದರಿಂದ ಒಣಕೆಮ್ಮು ಕಡಿಮೆ ಆಗುತ್ತದೆ ಹಾಗು ತಲೆ ನೋವು ಸಹ ಕಡಿಮೆ ಆಗುತ್ತದೆ.
 
* ನೆಲ್ಲಿಕಾಯಿ ರಸವನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ ನೆಗಡಿ, ಕೆಮ್ಮು, ಕಫಗಳಿಂದ ದೂರವಿರಬಹುದು.
 
* ಓಮ್ ಕಾಳು ಮತ್ತು ಮೆಂತ್ಯವನ್ನು ನೀರಿನಲ್ಲಿ ಹಾಕಿ ಕುದಿಸಿ, ಅದರ ಕಷಾಯವನ್ನು ಜೇನುತುಪ್ಪದೊಂದಿಗೆ ದಿನಕ್ಕೆ 3 ಬಾರಿ ಕುಡಿದರೆ ಕಫ ನಿವಾರಣೆಯಾಗುತ್ತದೆ.
 
* 1 ಚಮಚ ತುಳಸಿ ರಸಕ್ಕೆ 1/4 ಚಮಚ ಜೇನುತುಪ್ಪವನ್ನು ಬೆರೆಸಿ 3-4 ದಿನಗಳ ಕಾಲ ಸೇವಿಸುವುದರಿಂದ ಕೆಮ್ಮು ಮತ್ತು ಜ್ವರ ನಿವಾರಣೆಯಾಗುತ್ತದೆ.
 
* ವೀಲ್ಯದೆಲೆಯ ರಸದ ಜೊತೆ ಜೇನುತುಪ್ಪವನ್ನು ಬೆರೆಸಿ ತಿಂದರೆ ಕಫ ಮತ್ತು ಕೆಮ್ಮು ನಿವಾರಣೆಯಾಗುತ್ತದೆ.
 
* 1 ಚಮಚ ಈರುಳ್ಳಿ ರಸಕ್ಕೆ 2 ಚಮಚ ಜೇನುತುಪ್ಪ ಸೇರಿಸಿ ಸೇವಿಸಿ.

Share this Story:

Follow Webdunia kannada

ಮುಂದಿನ ಸುದ್ದಿ

ಹೀಗೆ ಮಾಡಿದರೆ ಹೃದಯ ಸಂಬಂಧಿ ಕಾಯಿಲೆ ಬರುತ್ತದೆಯಂತೆ ಹುಷಾರು!