Select Your Language

Notifications

webdunia
webdunia
webdunia
webdunia

ಕರುಣಾನಿಧಿ ಆರೋಗ್ಯ ಮತ್ತೆ ಚಿಂತಾಜನಕ

ಕರುಣಾನಿಧಿ ಆರೋಗ್ಯ ಮತ್ತೆ ಚಿಂತಾಜನಕ
ಚೆನ್ನೈ , ಮಂಗಳವಾರ, 7 ಆಗಸ್ಟ್ 2018 (09:04 IST)
ಚೆನ್ನೈ: ಡಿಎಂಕೆ ಮುಖ್ಯಸ್ಥ, ತಮಿಳುನಾಡು ಮಾಜಿ ಸಿಎಂ ಎಂ ಕರುಣಾನಿಧಿ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದೆ. ಅವರ ಆರೋಗ್ಯ ಸ್ಥಿತಿ ಮತ್ತೆ ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.

ಜ್ವರ ಮತ್ತು ಮೂತ್ರ ಸೋಂಕಿನಿಂದ ಬಳಲುತ್ತಿದ್ದ ಕರುಣಾನಿಧಿ ಒಂದು ವಾರದ ಹಿಂದೆ ರಕ್ತದೊತ್ತಡದಲ್ಲಿ ತೀವ್ರ ಏರುಪೇರಾದ ಹಿನ್ನಲೆಯಲ್ಲಿ ನಗರದ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದರು. ಅದಾದ ಬಳಿಕ ಕರುಣಾನಿಧಿ ಆರೋಗ್ಯ ಸುಧಾರಿಸಿತ್ತಾದರೂ, ಇದೀಗ ಮತ್ತೆ ಆರೋಗ್ಯ ಹದಗೆಟ್ಟಿದೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.

ಮುಂದಿನ 24 ಗಂಟೆಯೊಳಗೆ ಅವರ ಪ್ರಮುಖ ಅಂಗಾಗಳು ಕಾರ್ಯನಿರ್ವಹಿಸುವಂತೆ ಮಾಡಬೇಕಿದೆ. ಹೀಗಾಗಿ ಮುಂದಿನ ಒಂದು ದಿನ ಮಹತ್ವದ್ದಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಕರುಣಾನಿಧಿ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿರುವ ಹಿನ್ನಲೆಯಲ್ಲಿ ಕುಟುಂಬ ವರ್ಗ ಆಸ್ಪತ್ರೆಗೆ ದೌಡಾಯಿಸಿದೆ. ಅಲ್ಲದೆ, ಆಸ್ಪತ್ರೆಯ ಸುತ್ತಮುತ್ತ ಅಭಿಮಾನಿಗಳ ದಂಡೇ ನೆರೆದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಸಾರಿಗೆ ಮುಷ್ಕರಕ್ಕೆ ಬೆಂಗಳೂರು ಕ್ಯಾರೇ ಎನ್ನಲಿಲ್ಲ