Publish Date: Fri, 03 Aug 2018 (10:13 IST)
Updated Date: Fri, 03 Aug 2018 (10:14 IST)
ಬೆಂಗಳೂರು: ತೀವ್ರ ಅನಾರೋಗ್ಯದಿಂದಾಗಿ ಆಸ್ಪತ್ರೆಯಲ್ಲಿರುವ ಡಿಎಂಕೆ ಮುಖ್ಯಸ್ಥ, ತಮಿಳುನಾಡು ಮಾಜಿ ಸಿಎಂ ಎಚ್ ಡಿ ದೇವೇಗೌಡ ಇಂದು ಸಂಜೆ ಚೆನ್ನೈಗೆ ತೆರಳಲಿದ್ದಾರೆ.
ಇದೀಗ ದೆಹಲಿಯಲ್ಲಿರುವ ದೇವೇಗೌಡರು ಮಧ್ಯಾಹ್ನ ನೇರವಾಗಿ ಚೆನ್ನೈಗೆ ತೆರಳಲಿದ್ದಾರೆ. ಸುಮಾರು 3.30 ಕ್ಕೆ ಚೆನ್ನೈ ತಲುಪಲಿರುವ ದೇವೇಗೌಡರು ಸಂಜೆ 5 ಗಂಟೆಗೆ ಕರುಣಾನಿಧಿಯವರನ್ನು ಭೇಟಿಯಾಗಲಿದ್ದಾರೆ.
ದೇವೇಗೌಡರಿಗೆ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಅಲಿ ಸಾಥ್ ನೀಡಲಿದ್ದಾರೆ. ಇನ್ನು, ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕರುಣಾನಿಧಿ ಆರೋಗ್ಯ ಈಗ ಸುಧಾರಿಸುತ್ತಿದೆ ಎಂದು ಪುತ್ರ ಎಂಕೆ ಸ್ಟಾಲಿನ್ ಹೇಳಿಕೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.