Select Your Language

Notifications

webdunia
webdunia
webdunia
webdunia

ಕರುಣಾನಿಧಿ ಎದುರು ರಾಹುಲ್ ಗಾಂಧಿ ಫೋಟೋ ವಿವಾದದಲ್ಲಿ!

ಕರುಣಾನಿಧಿ ಎದುರು ರಾಹುಲ್ ಗಾಂಧಿ ಫೋಟೋ ವಿವಾದದಲ್ಲಿ!
ಚೆನ್ನೈ , ಗುರುವಾರ, 2 ಆಗಸ್ಟ್ 2018 (09:28 IST)
ಚೆನ್ನೈ: ಅನಾರೋಗ್ಯದಿಂದಾಗಿ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಡಿಎಂಕೆ ಮುಖ್ಯಸ್ಥ, ತಮಿಳುನಾಡು ಮಾಜಿ ಸಿಎಂ ಕರುಣಾನಿಧಿ ಭೇಟಿಗೆ ಹೋಗಿದ್ದ ರಾಹುಲ್ ಗಾಂಧಿ ಇದೀಗ ಬಿಜೆಪಿ ಟೀಕೆಗೆ ಗುರಿಯಾಗಿದೆ.

ಕರುಣಾನಿಧಿ ಆರೋಗ್ಯ ವಿಚಾರಿಸಲು ರಾಹುಲ್ ತೆರಳಿದ್ದಾಗಿನ ಫೋಟೋಗಳು ಪ್ರಸಾರವಾಗುತ್ತಿದ್ದಂತೆ ಬಿಜೆಪಿ ಅದರಲ್ಲಿ ರಾಹುಲ್ ನಗೆ ಮೊಗದಿಂದ ಇರುವುದನ್ನು ನೋಡಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡುತ್ತಿದೆ.

ಒಂದು ಕಡೆ ಅಸ್ವಸ್ಥರಾಗಿರುವ ಕರುಣಾನಿಧಿ ಕಿವಿಯಲ್ಲಿ ಪುತ್ರ ಸ್ಟಾಲಿನ್ ಏನೋ ಹೇಳುತ್ತಿದ್ದರೆ, ಇತ್ತ ರಾಹುಲ್ ಗಾಂಧಿ ಮುಖದಲ್ಲಿ ತಿಳಿ ನಗುವಿದೆ. ಈ ವ್ಯಕ್ತಿಗೆ ಎಲ್ಲಿ ನಗಬೇಕು, ಎಲ್ಲಿ ಗಂಭೀರವಾಗಿರಬೇಕು ಎಂದೇ ಗೊತ್ತಿಲ್ಲವೇ? ಎಂದು ಬಿಜೆಪಿ ನಾಯಕರು ಟೀಕಿಸುತ್ತಿದ್ದಾರೆ.

ಹಿಂದೊಮ್ಮೆ ಜಯಲಲಿತಾ ಮೃತದೇಹದ ಅಂತಿಮ ದರ್ಶನ ಪಡೆಯುವಾಗಲೂ ರಾಹುಲ್ ಗಾಂಧಿ ನಗುತ್ತಿದ್ದರು ಎಂದು ವಿವಾದವಾಗಿತ್ತು. ಇದೀಗ ಮತ್ತೆ ರಾಹುಲ್ ಗಾಂಧಿ ತಮ್ಮ ಮುಖಭಾವದಿಂದ ವಿಪಕ್ಷಗಳ ಟೀಕೆಗೆ ಗುರಿಯಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಮತ್ತೊಂದು ಸುತ್ತಿನ ಫೈಟ್ ಶುರುವಾಗುತ್ತಾ?