Publish Date: Tue, 31 Jul 2018 (09:07 IST)
Updated Date: Tue, 31 Jul 2018 (09:08 IST)
ಬೆಂಗಳೂರು: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟದ ಬಿಸಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಗೂ ತಟ್ಟಿದೆ.
ಪ್ರಸಕ್ತ ನಡೆಯುತ್ತಿರುವ ಸಂಸತ್ ಅಧಿವೇಶನದ ಬಳಿಕ ರಾಹುಲ್ ಗಾಂಧಿ ಉತ್ತರ ಕರ್ನಾಟಕ ಪ್ರವಾಸ ಮಾಡಲು ಯೋಚನೆ ನಡೆಸಿದ್ದರು. ಉತ್ತರ ಕರ್ನಾಟಕ ಭಾಗದಲ್ಲಿ ಬೃಹತ್ ರ್ಯಾಲಿ ನಡೆಸಲು ಕೆಪಿಸಿಸಿ ಚಿಂತನೆ ನಡೆಸಿತ್ತು.
ಆದರೆ ಇದೀಗ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಹೋರಾಟ ಬಿಸಿ ರಾಹುಲ್ ರಾಜ್ಯ ಪ್ರವಾಸಕ್ಕೆ ತಟ್ಟಿದೆ. ಈ ಭಾಗದಲ್ಲಿ ರ್ಯಾಲಿ ನಡೆಸಿದರೆ ರಾಹುಲ್ ಗೆ ಮುಜುಗರವಾಗುವ ಸಂದರ್ಭ ಎದುರಾಗಬಹುದು ಎನ್ನುವ ಕಾರಣಕ್ಕೆ ರಾಹುಲ್ ರಾಜ್ಯ ಪ್ರವಾಸ ಮುಂದೂಡುವಂತೆ ಉತ್ತರ ಕರ್ನಾಟಕ ಭಾಗದ ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.