Select Your Language

Notifications

webdunia
webdunia
webdunia
webdunia

ಕೆಪಿಎಲ್ ಸೀಸನ್ 7: ಮೈಸೂರು ವಾರಿಯರ್ಸ್ ತಂಡದ ನಾಯಕರಾಗಿ ಜೆ.ಸುಜೀತ್

ಕೆಪಿಎಲ್ ಸೀಸನ್ 7: ಮೈಸೂರು ವಾರಿಯರ್ಸ್ ತಂಡದ ನಾಯಕರಾಗಿ ಜೆ.ಸುಜೀತ್
ಮೈಸೂರು , ಗುರುವಾರ, 9 ಆಗಸ್ಟ್ 2018 (18:52 IST)
ಕಾರ್ಬಲ್ ಕೆಪಿಎಲ್ 7ನೇ ಆವೃತ್ತಿಯ ಮೈಸೂರು ವಾರಿಯರ್ಸ್ ತಂಡದ ನಾಯಕರಾಗಿ ಜೆ.ಸುಜೀತ್ ಆಯ್ಕೆಯಾಗಿದ್ದು, ತಂಡದ 18 ಆಟಗಾರರ ಪಟ್ಟಿಯನ್ನ ಅಧಿಕೃತವಾಗಿ ಪ್ರಕಟಿಸಲಾಯಿತು.

ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೈಸೂರು ವಾರಿಯರ್ಸ್ ತಂಡದ ಮಾಲೀಕರಾದ ಅರ್ಜುನ್ ರಂಗ,  ತಂಡದ 18 ಆಟಗಾರರ ಪಟ್ಟಿಯನ್ನ ಪ್ರಕಟಿಸಿದರು. ಇದೇ ತಿಂಗಳ 15 ರಿಂದ ಆರಂಭಗೊಳ್ಳಲಿರುವ ಕಾರ್ಬನ್ ಕೆಪಿಎಲ್ 7ನೇ ಆವೃತ್ತಿಯ ಪಂದ್ಯಗಳು ಬೆಂಗಳೂರಿನಲ್ಲಿ ಆರಂಭಗೊಂಡು ಹುಬ್ಬಳ್ಳಿ ಮತ್ತು ಮೈಸೂರಿನಲ್ಲಿ ಅಂತ್ಯಗೊಳ್ಲಲಿದೆ. ಮೈಸೂರಿನಲ್ಲಿ ಈ ಬಾರಿ ಕೆಲವು ಲೀಗ್ ಪಂದ್ಯಗಳು ಸೇರಿದಂತೆ ಕೆಪಿಎಲ್ 7ನೇ ಆವೃತ್ತಿಯ ಫೈನಲ್ ಪಂದ್ಯ ನಗರದ ಎಸ್ ಡಿಎನ್ ಆರ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದಕ್ಕಾಗಿ ಮೈಸೂರು ವಾರಿಯರ್ಸ್ ತಂಡ ಸರ್ವ ರೀತಿಯಲ್ಲೂ ಸಿದ್ದಗೊಂಡಿದ್ದು, ಇದೇ ಮೊದಲ ಬಾರಿಗೆ ಮೈಸೂರು ವಾರಿಯರ್ಸ್ ತಂಡವನ್ನ ಐಪಿಎಲ್ ಮತ್ತು ದೇಸಿ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಮೈಸೂರಿನ ಜೆ.ಸುಜೀತ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಅಲ್ಲದೆ ಪ್ರತಿಭಾನ್ವೇಷಣೆಯ ಮೂಲಕ ಮೈಸೂರಿನ ಇಬ್ಬರು ಆಲ್ ರೌಂಡರ್ ಆಟಗಾರರಾದ ಕಿಶನ್ ಬೆಡಾರೆ ಮತ್ತು ಗೌತಮ್ ಸಾಗರ್ ಅವರನ್ನ ತಂಡಕ್ಕೆ ಇದೇ ಮೊದಲ ಬಾರಿಗೆ ಆಯ್ಕೆ ಮಾಡಲಾಗಿದೆ.

ಮೈಸೂರು ವಾರಿಯರ್ಸ್ ತಂಡದ ಮೆಂಟರ್ ಆಗಿ ನೇಮಕಗೊಂಡಿರುವ ಭಾರತ ತಂಡದ ಮಾಜಿ ಆಟಗಾರ ವೆಂಕಟೇಶ್ ಪ್ರಸಾದ್ ತಂಡವನ್ನ ಉತ್ತಮ ರೀತಿಯಲ್ಲಿ ಸಜ್ಜುಗೊಳಿಸಿದ್ದು, ಈ ಬಾರಿ ಮೈಸೂರು ವಾರಿಯರ್ಸ್ ಕಪ್ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಪಾಕಿಸ್ತಾನಿ ನಿವಾಸಿಯ ಆಸ್ತಿ ಖರೀದಿಸಿ ಪೇಚಿಗೆ ಸಿಲುಕಿದ ಸಚಿವರ ಪುತ್ರ!