Select Your Language

Notifications

webdunia
webdunia
webdunia
webdunia

ಪಾಕಿಸ್ತಾನಿ ನಿವಾಸಿಯ ಆಸ್ತಿ ಖರೀದಿಸಿ ಪೇಚಿಗೆ ಸಿಲುಕಿದ ಸಚಿವರ ಪುತ್ರ!

ಪಾಕಿಸ್ತಾನಿ ನಿವಾಸಿಯ ಆಸ್ತಿ ಖರೀದಿಸಿ ಪೇಚಿಗೆ ಸಿಲುಕಿದ ಸಚಿವರ ಪುತ್ರ!
ರಾಯಚೂರು , ಗುರುವಾರ, 9 ಆಗಸ್ಟ್ 2018 (18:45 IST)
ಪಾಕಿಸ್ತಾನ ನಿವಾಸಿಯೊಬ್ಬರ ಆಸ್ತಿಯನ್ನ ಸಚಿವರ ಪುತ್ರನೊಬ್ಬ ಖರೀದಿ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ.
ಸಚಿವ ವೆಂಕಟರಾವ್ ನಾಡಗೌಡ ಪುತ್ರ ಪಾಕಿಸ್ತಾನ ನಿವಾಸಿಯೊಬ್ಬರ ಆಸ್ತಿಯನ್ನ ಖರೀದಿ ಮಾಡಿರುವ ವಿಷಯ ಈಗ ವಿವಾದಕ್ಕೆ ಸಿಲುಕಿದೆ. ಬಹುಕೋಟಿ ಬೆಲೆಯ ಜಮೀನನ್ನು ಅಕ್ರಮವಾಗಿ ಕಬಳಿಕೆ ಮಾಡಿದ್ದು, ಈ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇದ್ದರೂ ಸಹ ರಾಯಚೂರು ಜಿಲ್ಲಾಧಿಕಾರಿ ಕಣ್ಮುಚ್ಚಿ ಕುಳಿತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಸಚಿವ ವೆಂಕಟರಾವ್ ನಾಡಗೌಡರ ಪುತ್ರ ಅಭಿಷೇಕ್ ನಾಡಗೌಡ ಸೇರಿದಂತೆ ನಾಲ್ವರು ಪ್ರಭಾವಿಗಳು ರಾಯಚೂರು ಸೀಮಾಂತರದ 84 ಎಕರೆ ಇನಾಂ ಜಮೀನನ್ನ ಲೂಟಿ ಮಾಡಿದ್ದಾರೆ. ರಾಯಚೂರು ಸೀಮಾಂತರದ ಸರ್ವೇ ನಂಬರ್ 1362, 1359/1 ಹಾಗೂ 1356/2ರಲ್ಲಿನ ಖಾಜಿ ಮೊಹಮ್ಮದ್ ಅಬ್ದುಲ್ ರಸೂಲ್ ಸಿದ್ದಿಕಿ ಎಂಬುವವರಿಗೆ ಸೇರಿದ ಒಟ್ಟು 84 ಎಕರೆ ಜಮೀನು ಇತ್ತು. ಅವರು ದೇಶ ವಿಭಜನೆಯ ಬಳಿಕ ಪಾಕಿಸ್ತಾನಕ್ಕೆ ವಲಸೆ ಹೋಗಿದ್ದಾರೆ. ಆಗ ಸರ್ಕಾರದ ವಶವಾಗಬೇಕಿದ್ದ ಭೂಮಿಯನ್ನು ಪ್ರಭಾವಿಗಳ ಜೊತೆ ಶಾಮೀಲಾದ ಅಧಿಕಾರಿಗಳು ಖಾಸಗಿ ಆಸ್ತಿಯನ್ನಾಗಿ ಮಾಡಿದ್ದಾರೆ. ಇದ್ರಲ್ಲಿ ಸಚಿವ ವೆಂಕಟರಾವ್ ನಾಡಗೌಡ ಪುತ್ರ ಅಭಿಷೇಕ್ ನಾಡಗೌಡ 21 ಎಕರೆ ಜಮೀನು ಕಬಳಿಕೆ ಮಾಡಿದ್ದಾರೆ. ಉಳಿದಂತೆ ಬಿಜೆಪಿ ಮುಖಂಡ ಕಡಗೋಲ ಆಂಜನೇಯ, ಕಾಂಗ್ರೆಸ್ ಮುಖಂಡರಾದ ಶಿವಾನಂದ ಚುಕ್ಕಿ, ಉದಯಕುಮಾರ್ ಹಾಗೂ ಬಸವರಾಜ ವಕೀಲ್ ಎಂಬುವವರು ಜಮೀನು ಕಬಳಿಕೆ ಮಾಡಿದ್ದಾರೆ.

ಇನ್ನು ಕಬಳಿಕೆ ಆಗಿರುವ ಜಮೀನು ವಶಕ್ಕೆ ಪಡೆಯುವಂತೆ ರಾಯಚೂರು ಜಿಲ್ಲಾಧಿಕಾರಿಗಳಿಗೆ ಕಲಬುರಗಿ ಪ್ರಾದೇಶಿಕ ಆಯುಕ್ತರ ಆದೇಶವಿದ್ದರೂ ಕಿಮ್ಮತ್ತಿಲ್ಲದಂತಾಗಿದೆ. ಆರು ತಿಂಗಳ ಹಿಂದೆಯೇ ಡಿಸಿಗೆ ಆದೇಶ ಬಂದಿದ್ದರೂ ಕ್ರಮಕ್ಕೆ ಮುಂದಾಗುತ್ತಿಲ್ಲ ಎನ್ನಲಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಪೊಲೀಸ್‍ರು ಸಂವಿಧಾನದ ಮಾರ್ಗಸೂಚಿಯಂತೆ ಕರ್ತವ್ಯ ನಿರ್ವಹಿಸಬೇಕೆಂದ ಎಸ್ಪಿ