Publish Date: Thu, 09 Aug 2018 (13:00 IST)
Updated Date: Thu, 09 Aug 2018 (13:05 IST)
ಗುಜರಾತ್ : ಮಹಿಳೆಯೊಬ್ಬಳು ತಾನು ಜನಿಸಿದ ಗರ್ಭಾಶಯದಲ್ಲಿಯೇ ತನ್ನ ಮಗುವಿಗೆ ಜನ್ಮ ನೀಡುತ್ತಿರುವಂತಹ ವಿಚಿತ್ರವಾದ ಘಟನೆ ಗುಜರಾತ್ ನಲ್ಲಿ ನಡೆದಿದೆ.
ಗುಜರಾತ್ ಮೂಲದ 28 ವರ್ಷದ ಮಹಿಳೆಗೆ ಗರ್ಭಾಶಯವಿಲ್ಲದ ಕಾರಣ ಮಹಿಳೆ ಮಗುವಿಗೆ ಜನ್ಮ ನೀಡಲು ಸಾಧ್ಯವಾಗಿರಲಿಲ್ಲ. ಆದರೆ ಆ ಮಹಿಳೆ ತನ್ನದೇ ಮಗುವಿಗೆ ಜನ್ಮ ನೀಡುವ ಆಸೆಯನ್ನು ಹೊಂದಿದ್ದಳು. ಆದಕಾರಣ ಆ ಮಹಿಳೆಗೆ ಆಕೆ ತಾಯಿಯೇ ಗರ್ಭಶಾಯ ದಾನ ಮಾಡಿದ್ದಾಳೆ.
ಕೆಲ ತಿಂಗಳುಗಳ ಹಿಂದೆ ಪುಣೆಯ ಗ್ಯಾಲಕ್ಸಿ ಕೇರ್ ಲಿಪ್ರೋಪಿ ಆಸ್ಪತ್ರೆಯಲ್ಲಿ ಮಹಿಳೆಗೆ ಗರ್ಭಕೋಶ ಕಸಿ ನಡೆದಿತ್ತು. ಡಾ.ಶೈಲೇಶ್ ನೇತೃತ್ವದ 12 ವೈದ್ಯರ ತಂಡ 8 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ್ದರು. ಸತತ ನಾಲ್ಕು ಗಂಟೆಗಳ ಕಾಲ ಗರ್ಭಕೋಶ ಬೇರ್ಪಡಿಸುವ ಕಾರ್ಯ ನಡೆದಿತ್ತು. ಗರ್ಭಕೋಶ ಕಸಿ ಮಾಡಿಸಿಕೊಂಡ ಮಹಿಳೆ ಈಗ ಗರ್ಭವತಿ. ನಾನು ಜನಿಸಿದ ಗರ್ಭಾಶಯದಲ್ಲಿಯೇ ನನ್ನ ಮಗು ಬೆಳೆಯುತ್ತಿದೆ. ಇದು ಖುಷಿ ವಿಚಾರವೆಂದು ಆಕೆ ಹೇಳಿದ್ದಾಳೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ