Select Your Language

Notifications

webdunia
webdunia
webdunia
webdunia

ತಾಯಿ ಸೋನಿಯಾ ಗಾಂಧಿ ಕ್ಷೇತ್ರಕ್ಕೆ ಇನ್ನು ಪುತ್ರಿ ಪ್ರಿಯಾಂಕಾ ?

ತಾಯಿ ಸೋನಿಯಾ ಗಾಂಧಿ ಕ್ಷೇತ್ರಕ್ಕೆ ಇನ್ನು ಪುತ್ರಿ ಪ್ರಿಯಾಂಕಾ ?
ನವದೆಹಲಿ , ಶನಿವಾರ, 4 ಆಗಸ್ಟ್ 2018 (09:47 IST)
ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ‍ಪಕ್ಷದಿಂದ ರಾಯ್ ಬರೇಲಿ ಕ್ಷೇತ್ರದಲ್ಲಿ ಸ್ಪರ್ಧಿಸುವವರಾರು? ಸೋನಿಯಾ ಗಾಂಧಿಯಾ? ಪುತ್ರಿ ಪ್ರಿಯಾಂಕಾ ವಾದ್ರಾ ಅವರಾ?
 

ಈ ಬಗ್ಗೆ ಕಾಂಗ್ರೆಸ್ ನಲ್ಲಿ ಕೆಲವು ಚರ್ಚೆಗಳು ಶುರುವಾಗಿದೆ. ಅಮ್ಮ ಸೋನಿಯಾ ಗಾಂಧಿಯವರ ರಾಯ್ ಬರೇಲಿ ಕ್ಷೇತ್ರದಿಂದ ಪುತ್ರಿ ಪ್ರಿಯಾಂಕಾ ಸ್ಪರ್ಧಿಸಿ ಅಧಿಕೃತವಾಗಿ ರಾಜಕೀಯ ಪ್ರವೇಶಿಸುವ ಇರಾದೆ ಹೊಂದಿದ್ದಾರೆ ಎನ್ನಲಾಗಿದೆ.

ಆದರೆ ಅತ್ತ ಸಹೋದರ ರಾಹುಲ್ ಗಾಂಧಿ ಸತತ ನಾಲ್ಕನೇ ಬಾರಿಗೆ ಅಮೇಠಿಯಿಂದಲೇ ಸ್ಪರ್ಧಿಸಲಿದ್ದಾರೆ. ಕಾಂಗ್ರೆಸ್ ನ ಪ್ರಧಾನಿ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ರಾಹುಲ್ ಗಾಂಧಿಗೆ ಈಗ ಮಿತ್ರ ಪಕ್ಷಗಳ ಬೆಂಬಲ ಬೇಕಾಗಿದೆ. ಆದರೆ ಎಲ್ಲಾ ಮಿತ್ರ ಪಕ್ಷಗಳೂ ರಾಹುಲ್ ‍ಪ್ರಧಾನಿಯಾಗುವುದನ್ನು ಒಪ್ಪಿಕೊಳ್ಳುತ್ತಿಲ್ಲ. ಹೀಗಾಗಿ ಆ ವಿಚಾರ ಕಗ್ಗಂಟಾಗಿಯೇ ಇದೆ. ಆದರೆ ಪ್ರಿಯಾಂಕಾ ವಾದ್ರಾ ರಾಜಕೀಯ ಪ್ರವೇಶಿಸುವ ಮೂಲಕ ಕಾಂಗ್ರೆಸ್ ಗೆ ಮತ್ತಷ್ಟು ವರ್ಚಸ್ಸು ಬರಬಹುದು ಎಂಬ ಲೆಕ್ಕಾಚಾರ ಪಕ್ಷದ್ದು ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಲಿರುವ ವಿಪಕ್ಷಗಳು