Daily Horoscope

Select Your Language

Notifications

webdunia
webdunia
webdunia
webdunia

ತಾನೇ ಹೆತ್ತ ನವಜಾತ ಮಗುವನ್ನು ಕೊಂದ ತಾಯಿ! ಕಾರಣ ಕೇಳಿದ್ರೆ ಶಾಕ್!

ಅಮ್ಮ
ನವದೆಹಲಿ: ಮಕ್ಕಳು ಕೆಟ್ಟವರಾಗಬಹುದೇ ಹೊರತು, ಹೆತ್ತ ತಾಯಿ ಎಂದೂ ಮಕ್ಕಳ ಪಾಲಿಗೆ ಕೆಟ್ಟವರಾಗಳು ಎಂಬ ಮಾತನ್ನು ಈ ತಾಯಿ ಸುಳ್ಳು ಮಾಡಿದ್ದಾಳೆ.
 

ತಾನು ಅದಾಗ ತಾನೇ ಹೆತ್ತ ಮಗುವನ್ನು ತನ್ನ ಕೈಯಾರೆ ಉಸಿರುಗಟ್ಗ್ಟಿಸಿ ಕೊಂದು ತಾಯ್ತನಕ್ಕೇ ಕಳಂಕ ತಂದಿದ್ದಾಳೆ. ಇದು ನಡೆದಿರುವುದು ಪಶ್ಚಿಮ ದೆಹಲಿಯಲ್ಲಿ. ಆಕೆಯ ಮಾನಸಿಕ ಸ್ಥಿತಿ ಸರಿಯಾಗಿರಲಿಲ್ಲ, ಖಿನ್ನತೆಯಿಂದ ಬಳಲುತ್ತಿದ್ದಳು ಎನ್ನಲಾಗಿದೆ.

ರೀಟಾ ದೇವಿ ಎಂಬಾಕೆ ತನಗೆ ಮೂರನೇ ಮಗುವೂ ಹೆಣ್ಣಾಯಿತು ಎಂದು ಬೇಸರದಲ್ಲಿ ಮುಗ್ಧ ಕಂದಮ್ಮನನ್ನು ಕೊಲೆಗೈದಿದ್ದಾಳೆ. ಹೆರಿಗೆಗಿಂತ ಮೊದಲು ರೀಟಾ ದೇವಿ ತನಗೆ ಎರಡೂ ಹೆಣ್ಣು ಮಕ್ಕಳೆಂದು ಗಂಡ ನಿತ್ಯವೂ ಜಗಳವಾಡುತ್ತಿರುತ್ತಾನೆ ಎಂದಿದ್ದಳಂತೆ. ಆದರೆ ಪತಿ ಅಶ್ರಫಿ ಮಹ್ತೋ ಇದನ್ನು ನಿರಾಕರಿಸಿದ್ದಾನೆ. ತಮ್ಮ ಬಡ ಕುಟುಂಬ, ಹೆಣ್ಣಾದರೇನು, ಗಂಡಾದರೇನು ಎಂದಿದ್ದಾನೆ. ಅಂತೂ ಇದೀಗ ಪೊಲೀಸರು ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಲೋಕಸಭೆ ಮೈತ್ರಿಗೆ ಕಾಂಗ್ರೆಸ್ ನಲ್ಲಿ ವಿರೋಧ