Select Your Language

Notifications

webdunia
webdunia
webdunia
webdunia

ಮಗು ಬರುವ ಮುಂಚೆ ಗಡ್ಡ ಬೋಳಿಸಿ ಯಶ್! ಯಶ್-ರಾಧಿಕಾಗೆ ಬರ್ತಿರುವ ಸಲಹೆಗಳ ಸ್ಯಾಂಪಲ್ ಇಲ್ಲಿವೆ ನೋಡಿ!

ಮಗು ಬರುವ ಮುಂಚೆ ಗಡ್ಡ ಬೋಳಿಸಿ ಯಶ್! ಯಶ್-ರಾಧಿಕಾಗೆ ಬರ್ತಿರುವ ಸಲಹೆಗಳ ಸ್ಯಾಂಪಲ್ ಇಲ್ಲಿವೆ ನೋಡಿ!
ಬೆಂಗಳೂರು , ಬುಧವಾರ, 1 ಆಗಸ್ಟ್ 2018 (09:24 IST)
ಬೆಂಗಳೂರು: ಸ್ಯಾಂಡಲ್ ವುಡ್ ಪ್ರಿನ್ಸೆಸ್ ರಾಧಿಕಾ ಪಂಡಿತ್ ಮತ್ತು ರಾಕಿಂಗ್ ಸ್ಟಾರ್ ಯಶ್ ಇತ್ತೀಚೆಗಷ್ಟೇ ತಮಗೆ ಮಗುವಾಗಲಿರುವ ವಿಚಾರವನ್ನು ಹಂಚಿಕೊಂಡಿದ್ದರು.
 

ಅಷ್ಟೇ ಸಾಕಾಯಿತು ನೋಡಿ ಅಭಿಮಾನಿಗಳಿಗೆ. ಇದೀಗ ರಾಧಿಕಾ ಪಂಡಿತ್ ಮತ್ತು ಯಶ್ ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಬಿಟ್ಟಿ ಸಲಹೆಗಳು ಬರಲಾರಂಭಿಸಿವೆ.

ಎಷ್ಟೆಂದರೆ ಕೆಲವರು ಪುಸ್ತಕ ಓದಿ, ಪ್ರೊಟೀನ್, ಹಣ್ಣು ಹಂಪಲು ತೆಗೆದುಕೊಳ್ಳಿ ಎಂಬ ಸಾಮಾನ್ಯ ಸಲಹೆಗಳ ಜತೆಗೆ, ಯಶ್ ಇದ್ದ ಕಾರಣ ನಿಮ್ಮ ಆರೋಗ್ಯದ ಬಗ್ಗೆ ಚಿಂತೆ ಮಾಡಬೇಕಾಗಿಯೇ ಇಲ್ಲ ಎಂದು ಸಮಾಧಾನಪಟ್ಟುಕೊಳ್ಳುವವರೂ ಇದ್ದಾರೆ.

ಇದರ ಜತೆಗೆ ಒಬ್ಬರಂತೂ ಮಗು ಹುಟ್ಟುವ ಮೊದಲು ಗಡ್ಡ ಬೋಳಿಸಿ. ಇಲ್ಲಾಂದ್ರೆ ಯಾವುದೋ ಕಾಡು ಮೃಗ ಅಂದುಕೊಂಡು ಮಗು ನಿಮ್ಮನ್ನು ನೋಡಿ ಹೆದರಿಕೊಂಡೀತು ಎಂದು ಯಶ್ ಗೆ ಪುಕ್ಸಟೆ ಸಲಹೆ ಕೊಟ್ಟವರು ಇದ್ದಾರೆ! ಮತ್ತೆ ಕೆಲವರು ಈಗ್ಲಾದ್ರೂ ರಾಧಿಕಾ ಅತ್ತಿಗೆ ಜತೆ ಸ್ವಲ್ಪ ಸಮಯ ಕಳೆಯಿರಿ ಅಣ್ಣ ಎಂದು ಯಶ್ ಗೆ ಪ್ರೀತಿಯಿಂದಲೇ ಹೇಳಿದ್ದಾರೆ! ಅದಕ್ಕೂ ಮುಂದೆ ಹೋಗಿ ಕೆಲವರು ತಮ್ಮ ನಂಬಿಕೆಯ ಧರ್ಮದ ಪುಟದಲ್ಲಿ ಹೇಳಿದ ಸಾರವನ್ನು ಬರೆದುಕೊಂಡಿದ್ದರೆ ಇನ್ನು ಕೆಲವರು  ಈ ಮುದ್ದಾದ ಜೋಡಿಯ ದೃಷ್ಟಿಯೇ ತೆಗೆದುಬಿಟ್ಟಿದ್ದಾರೆ! ಅಬ್ಬಾ.. ಅಭಿಮಾನಿಗಳ ಪ್ರೀತಿಗೆ ಇನ್ನೇನು ಹೇಳಬೇಕು?!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

Share this Story:

Follow Webdunia kannada

ಮುಂದಿನ ಸುದ್ದಿ

ರಾಘವ ಲಾರೆನ್ಸ್ ಗಾಗಿ ನಟಿ ಶ್ರೀರೆಡ್ಡಿ ಅಪ್ಲೋಡ್ ಮಾಡಿದ ವಿಡಿಯೋ ಏನು ಗೊತ್ತಾ...?