Select Your Language

Notifications

webdunia
webdunia
webdunia
webdunia

ಪ್ರೀತಿಸಿ ಮದುವೆಯಾದರು: ಮಗಳ ಕೊಲ್ಲಲು ಸುಪಾರಿ ಕೊಟ್ಟ ತಂದೆ?

ಪ್ರೇಮಿಗಳು
ಮೈಸೂರು , ಗುರುವಾರ, 2 ಆಗಸ್ಟ್ 2018 (21:11 IST)
ಅವರು 8 ವರ್ಷ ಪ್ರೀತಿಸಿದರು. ಮದುವೆ ಆದರು. ಈಗ ಅವರಿಗೆ ಜೀವ ಬೆದರಿಕೆ ಕಾಡಲಾರಂಭಿಸಿದೆ.


ತಂದೆ ಮೇಲೆ ಸ್ವಂತ ಮಗಳನ್ನು ಕೊಲ್ಲಲು ಸುಪಾರಿ ಕೊಟ್ಟ ಆರೋಪ ಕೇಳಿಬಂದಿದೆ. 

ಮೈಸೂರು ಜಿಲ್ಲೆ ಪಿರಿಯಾಪಟ್ಟಣ ಪಟ್ಟಣದಲ್ಲಿ ಪ್ರೇಮಿಗಳಿಗೆ ಪ್ರಾಬ್ಲಮ್ ಶುರುವಾಗಿದೆ. ಪ್ರತಾಪ್ ಹಾಗೂ ಪೂಜ ಜೀವ ಭಯದಲ್ಲಿರುವ ಪ್ರೇಮಿಗಳಾಗಿದ್ದಾರೆ. ಪೂಜಾ ತಂದೆ ಸುರೇಶ್ ಕುಮಾರ್ ನಮ್ಮಿಬ್ಬರನ್ನು ಕೊಲ್ಲಲು ನಿಂತಿದ್ದಾರೆ.

ಕೇರಳದಿಂದ ರೌಡಿಗಳನ್ನು ಕರೆಸಿ ನಮ್ಮನ್ನ ಮುಗಿಸಲು ಸುಪಾರಿ ಕೇಳಿದ್ದಾನೆ. ಪಿರಿಯಾಪಟ್ಟಣದ ನೇಮಿಚಂದ್ ಹಾಗೂ ಪಿಂಟು@ಹೇಮಚಂದ್ ರಿಂದ ಪ್ರೇಮಿಗಳಿಗೆ ಕೊಲೆ ಬೆದರಿಕೆ ಹಾಕಲಾಗಿದೆಯಂತೆ. ಹೀಗಾಗಿ ಸ್ವಂತ ಗ್ರಾಮಕ್ಕೆ ಹೋಗಲು ಹೆದರಿ ಸಹಾಯ ಬೇಡುತ್ತಿರುವ ಪ್ರೇಮಿಗಳು. ಗ್ರಾಮದವರು ಸಹಾಯ ಮಾಡಿ ಎಂದು ವೀಡಿಯೋ ಮಾಡಿ ವೈರಲ್ ಮಾಡುತ್ತಿರುವ ಪ್ರೇಮಿಗಳು. ತಮಗೆ ಜೀವ ಭಯ ಇರುವ ಕುರಿತು ಹೇಳಿಕೊಂಡಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಹಾಡು ಹಗಲೇ ಮನೆ ಬಾಗಿಲು ಮುರಿದು ಕಳ್ಳತನ