ತಮ್ಮ ಮದುವೆ ಫೋಟೊವನ್ನು ತಿರುಚಿದ ಅಭಿಮಾನಿಗೆ ನಟಿ ಸಮಂತಾ ಹೇಳಿದ್ದೇನು ಗೊತ್ತಾ...?

ಗುರುವಾರ, 2 ಆಗಸ್ಟ್ 2018 (12:56 IST)
ಹೈದರಾಬಾದ್ : ಒಬ್ಬ ನಟಿ ಎಷ್ಟೇ ದೊಡ್ಡ ಸ್ಟಾರ್ ಆದರೂ ಕೂಡ ತಮ್ಮ ವೈಯಕ್ತಿಕ ಜೀವನದ ವಿಚಾರಕ್ಕೆ ಬಂದಾಗ ಕೋಪಗೊಳ್ಳುತ್ತಾರೆ. ಆದರೆ ನಟಿ ಸಮಂತಾ  ಅವರು ಮಾತ್ರ ತಮ್ಮ ಮದುವೆ ಫೋಟೊವನ್ನು ತಿರುಚಿ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ ಅಭಿಮಾನಿಯೊಬ್ಬನಿಗೆ ಸಮಾಧಾನದಿಂದ ಉತ್ತರಿಸಿದ್ದಾರೆ.


ನಟಿ ಸಮಂತಾ ನಟ ನಾಗಚೈತನ್ಯ ಅವರನ್ನು ಪ್ರೀತಿಸಿ ಮದುವೆಯಾಗಿ ಸಾಂಸಾರಿಕ ಜೀವನ ಹಾಗೂ ಸಿನಿವೃತ್ತಿ ಎರಡನ್ನು ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಈ ನಡುವೆ ಅವರ ಅಭಿಮಾನಿಯೊಬ್ಬ ಸಮಂತಾ ಹಾಗೂ ನಾಗಚೈತನ್ಯ ಅವರ ವಿವಾಹದ ಫೋಟೋವನ್ನು ತಿರುಚಿ ಸಮಂತಾ ಜೊತೆಗಿದ್ದ ನಾಗಚೈತನ್ಯ ಸ್ಥಳಕ್ಕೆ ತನ್ನ ಫೋಟೋವನ್ನು ಹಾಕಿ ಅದನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾನೆ.


ಆದರೆ ಇದನ್ನು ನೋಡಿ ಕೋಪಗೊಳ್ಳದ ನಟಿ ಸುಮಂತಾ ತಮಾಷೆಯಾಗಿ ಆತನಿಗೆ ಉತ್ತರ ನೀಡಿದ್ದಾರೆ. ಇಟ್ಸ್ ಲವ್ ಎಟ್ ಫಸ್ಟ್ ಸೈಟ್. ಆದರೂ ಈ ಫೋಟೋ ಹೇಗೆ ಲೀಕ್ ಆಗಿದೆ ಗೊತ್ತಿಲ್ಲ ಎಂದು ಹಾಸ್ಯಚಟಾಕಿ ಹಾರಿಸಿದ್ದಾರೆ. ನನ್ನಲ್ಲೂ ಒಂದಷ್ಟು ಕಲೆಕ್ಷನ್ ಗಳಿವೆ, ಆದರೆ ಚೈತುಗೆ (ಪತಿ ನಾಗಚೈತನ್ಯ)ಗೆ ಹೆದರಿ ನಾನು ಇದನ್ನು ಎಲ್ಲಿಯೂ ಪೋಸ್ಟ್ ಮಾಡಿಲ್ಲ ಎಂದು ಉತ್ತರಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮುಖ್ಯಮಂತ್ರಿ ಜಯಲಲಿತಾ ಜೀವನಕತೆಯಲ್ಲಿ ನಟಿಸುವ ಹಂಬಲವಿದೆಯಂತೆ ಈ ನಟಿಗೆ